ಭಾರೀ ಮಳೆ: ಲಕ್ಷಗಟ್ಟಲೆ ಟನ್ ಕಸದ ರಾಶಿಯಡಿ ಹೂತು ಹೋಗುತ್ತಿದೆ ಮಂಗಳೂರಿನ ಈ ಪ್ರದೇಶ! | Vartha Bharati- ವಾರ್ತಾ ಭಾರತಿ

ಭಾರೀ ಮಳೆ: ಲಕ್ಷಗಟ್ಟಲೆ ಟನ್ ಕಸದ ರಾಶಿಯಡಿ ಹೂತು ಹೋಗುತ್ತಿದೆ ಮಂಗಳೂರಿನ ಈ ಪ್ರದೇಶ!

ಮಳೆಯ ಪ್ರವಾಹವು ದ.ಕ. ಜಿಲ್ಲೆಯನ್ನೊಳಗೊಂಡು ಭಾರೀ ಅನಾಹುತಗಳನ್ನೇ ಸೃಷ್ಟಿಸಿದ್ದರೆ, ಮಂಗಳೂರು ನಗರ ಹಚ್ಚ ಹಸುರಿನ ಪ್ರದೇಶವೊಂದು ಮಾನವ ನಿರ್ಮಿತ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಅಲ್ಲಿನ ಕುಟುಂಬಗಳ ಬದುಕನ್ನು ನರಕಸದೃಶಗೊಳಿಸಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಕುಡುಪು ಸಮೀಪದ ಮಂದಾರ ಪ್ರದೇಶವೀಗ ಮಂಗಳೂರು ನಗರದ ಹತ್ತಾರು ವರ್ಷಗಳ ಲಕ್ಷಗಟ್ಟಲೆ ಟನ್ ಕಸದ ರಾಶಿಯಡಿ ಹೂತು ಹೋಗುತ್ತಿದೆ. ಹಚ್ಚ ಹಸುರಿನ ಮಂದಾರವೀಗ ಅಕ್ಷರಶ: ತ್ಯಾಜ್ಯಮಯವಾಗಿದೆ.

Back to Top