ಚಿಕ್ಕಮಗಳೂರು| ಅ.3ರಂದು ಬ್ಯಾರಿ ಭಾಷಾ ದಿನಾಚರಣೆ
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಸಹಯೋಗ ದೊಂದಿಗೆ ಅ.3ರಂದು ಬೆಳಗ್ಗೆ 9ಕ್ಕೆ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದೆ. ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆಯುವ ಚಿಕ್ಕಮಗಳೂರು ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯನ್ನು ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಟಿ.ಎಂ. ನಾಸಿರ್ ಉದ್ಘಾಟಿಸಲಿದ್ದಾರೆ.
ಪೂ.11ಕ್ಕೆ ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಹೆಚ್.ಡಿ. ತಮ್ಮಯ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಕಾಡಮಿಯ ಅಧ್ಯಕ್ಷ ಉಮರ್ ಯು. ಹೆಚ್. ಅಧ್ಯಕ್ಷತೆಯಲ್ಲಿ ನಡೆಯಲಿ ರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಶಂಷುದ್ದೀನ್ ಮಡಿಕೇರಿ ಆಶಯ ಭಾಷಣ ಮಾಡಲಿದ್ದಾರೆ. ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ಕರಂಬಾರ್ ಮುಹಮ್ಮದ್ ದಫ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಗೌರವಾಧ್ಯಕ್ಷ ರಹೀಂ ಶೇಕ್ ಬ್ಯಾರಿ, ಉಪಾಧ್ಯಕ್ಷರಾದ ಹೆಚ್.ಯು. ಫಾರೂಕ್, ಅಬ್ದುಲ್ ವಾಹಿದ್ ಮಾಗುಂಡಿ, ಅಬ್ಬಾಸ್ ಬಕ್ರಹಳ್ಳಿ, ಅಹ್ಮದ್ ಬಾವಾ ಬಿಳಗುಳ, ಅಕಾಡಮಿಯ ಮಾಜಿ ಸದಸ್ಯರಾದ ಹಾಜಿ ಸಿ.ಕೆ. ಇಬ್ರಾಹಿಂ, ಅಬ್ಬಾಸ್ ಕಿರುಗುಂದ, ಶೇಖಬ್ಬ ಎನ್.ಆರ್. ಪುರ, ಅಬ್ದುಲ್ ರಝಾಕ್ ಉಪ್ಪಳ್ಳಿ, ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಮಾಜಿ ಗೌರವಾಧ್ಯಕ್ಷ ಸಿ.ಎಸ್. ಖಲಂದರ್, ಮಾಜಿ ಉಪಾಧ್ಯಕ್ಷ ಬದ್ರಿಯಾ ಮುಹಮ್ಮದ್, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಬಿ.ಹೆಚ್. ನೂರ್ ಮುಹಮ್ಮದ್, ಮುಹಮ್ಮದ್ ಹನೀಫ್, ಚಿಕ್ಕಮಗಳೂರು ನಗರಸಭಾ ಸದಸ್ಯರಾದ ಖಲಂದರ್ ಉಪ್ಪಳ್ಳಿ, ಮುನೀರ್ ಶಾಂತಿನಗರ, ಮಲ್ನಾಡ್ ಗಲ್ಫ್ ಟ್ರಸ್ಟ್ನ ಅಧ್ಯಕ್ಷ ಅಕ್ರಂ ಹಾಜಿ, ಗುತ್ತಿಗೆದಾರ ಪುತ್ತುಮೋನು, ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ಎ.ಯು. ಇಬ್ರಾಹಿಂ, ಮೂಡಿಗೆರೆ ತಾಲೂಕು ಅಧ್ಯಕ್ಷ ಬಿ.ಹೆಚ್. ಮುಹಮ್ಮದ್, ತರೀಕೆರೆ ತಾಲೂಕು ಅಧ್ಯಕ್ಷ ಮುಹಮ್ಮದ್ ರಫೀಕ್, ಬಾಳೆಹೊನ್ನೂರು ಬ್ಲಾಕ್ ಅಧ್ಯಕ್ಷ ಇಬ್ರಾಹಿಂ ಶಾಫಿ, ಕಳಸ ತಾಲೂಕು ಅಧ್ಯಕ್ಷ ನೌಶಾದ್ ಅಲಿ, ಕೊಪ್ಪತಾಲೂಕು ಅಧ್ಯಕ್ಷ ಬಿ. ಮುಹಮ್ಮದ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅಕಾಡಮಿಯ ಸದಸ್ಯ ಬಿ.ಎಸ್.ಮುಹಮ್ಮದ್ ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದು, ಮಧ್ಯಾಹ್ನ 2ಕ್ಕೆ ಹಿರಿಯ ಸಾಹಿತಿ ಮುಹಮ್ಮದ್ ಬಡ್ಡೂರು ಅಧ್ಯಕ್ಷತೆಯಲ್ಲಿ ಬ್ಯಾರಿ ಕವಿಗೋಷ್ಠಿ ನಡೆಯಲಿದೆ. ಕವಿಗೋಷ್ಠಿಯಲ್ಲಿ ಅಶ್ರಫ್ ಅಪೋಲೋ ಕಲ್ಲಡ್ಕ, ಇದಿನಬ್ಬ ಬ್ಯಾರಿ ಕೊಪ್ಪ, ಅಲ್ತಾಫ್ ಬಿಳಗುಳ ಮೂಡಿಗೆರೆ, ಬಶೀರ್ ಅಹ್ಮದ್ ಕಿನ್ಯಾ, ಮುಹಮ್ಮದ್ ಶರೀಫ್ ನಿರ್ಮುಂಜೆ ಮತ್ತು ರಶೀದ್ ನಂದಾವರ ಭಾಗವಹಿಸಲಿದ್ದಾರೆ. ರಶೀದ್ ನಂದಾವರ ಬಳಗದಿಂದ ಬ್ಯಾರಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.