ಡಿ.2: ವಿಮ್ ಅಭಿಯಾನದ ಸಮಾರೋಪ
ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ ಮಹಿಳಾ ಸುರಕ್ಷತೆ ಸಾಮೂಹಿಕ ಜವಾಬ್ದಾರಿ ಎಂಬ ಘೋಷಣೆಯಡಿ ಅ.2ರಿಂದ ಆರಂಭಿಸಿರುವ ರಾಷ್ಟ್ರೀಯ ಅಭಿಯಾನದ ಸಮರೋಪವು ಡಿ.2ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿದೆ.
ಗಂಗಾವತಿಯ ಬೇರೂನಿ ಆಬಾದಿ ಮಸ್ಜಿದ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಷ್ಟ್ರಾಧ್ಯಕ್ಷೆ ಯಾಸ್ಮಿನ್ ಇಸ್ಲಾಂ ಉದ್ಘಾಟಿಸುವರು. ಜಿಲ್ಲಾಧ್ಯಕ್ಷೆ ಸುಹಾನ ಅಧ್ಯಕ್ಷತೆ ವಹಿಸುವರು. ರಾಜ್ಯಾದ್ಯಕ್ಷೆ ಫಾತಿಮಾ ನಸೀಮಾ ಸಮಾರೋಪ ಭಾಷಣ ಮಾಡುವರು. ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸಮಿತಿ ಸದಸ್ಯೆ ಸಾದಿಯಾ ಸೈದಾ, ಸಾಮಾಜಿಕ ಹೋರಾಟಗಾರ್ತಿ ಸುಮತಿ ಕ್ಯಾಸಂಬಳ್ಳಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ಸಮಿತಿ ಸದಸ್ಯೆ ಸಮೀನಾ ಕೌಸರ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ, ರಾಜ್ಯ ಕೋಶಾಧಿಕಾರಿ ರಿಹಾನ, ರಾಜ್ಯ ಸಮಿತಿ ಸದಸ್ಯರಾದ ಜಬೀನ, ಸಾನಿಯಾ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story