ಅಖಿಲ ಭಾರತ ಸೀನಿಯರ್ ನ್ಯಾಶನಲ್ ಸಾಫ್ಟ್ ಬಾಲ್ ಚಾಂಪಿಯನ್‍ಶಿಪ್ : ಬನ್ನಡ್ಕ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

ಮೂಡುಬಿದಿರೆ : ಡಿ.13ರಿಂದ 18ರವರೆಗೆ ಕೊಲ್ಕೊತ್ತಾದಲ್ಲಿ ನಡೆಯಲಿರುವ ಅಖಿಲ ಭಾರತ ಸೀನಿಯರ್ ನ್ಯಾಶನಲ್ ಸಾಫ್ಟ್ ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಇಲ್ಲಿನ ಬನ್ನಡ್ಕ ವಿಶ್ವವಿದ್ಯಾಲಯ ಕಾಲೇಜಿನ ತೃತೀಯ ಬಿಸಿಎ ವಿದ್ಯಾರ್ಥಿನಿಯರಾದ ಸಂಗೀತಾ ಪೂಜಾರಿ ಮತ್ತು ನಿಖಿತಾ ಸ್ಥಾನ ಪಡೆದಿದ್ದಾರೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರತ್ನಾಕರ ಪುತ್ತೂರಾಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





