ಮಂಗಳೂರು | ಭಾರತೀಯ ವೈದ್ಯಕೀಯ ಸಂಘದ ಮಾಸಿಕ ಕಾರ್ಯಗಾರ

ಮಂಗಳೂರು ,ಡಿ. 7: ಭಾರತೀಯ ವೈದ್ಯಕೀಯ ಸಂಘ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ವತಿಯಿಂದ ಸದಸ್ಯರಿಗೆ ಮಾಸಿಕ ಕಾರ್ಯಾಗಾರ ಕಿಯೋಸೈನ್ಸ್ ಹೆಲ್ತ್ ಕೇರ್ ಸಂಸ್ಥೆ ಹಾಗೂ ಲೂಪಿನ್ ಫಾರ್ಮಸಿಟಿಕಲ್ಸ್ ಆಶ್ರಯದಲ್ಲಿ ಶುಕ್ರವಾರ ನಗರದ ಹೊಟೇಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆಯಿತು.
ಐಎಂಎ ದ.ಕ. ಜಿಲ್ಲಾ ಅಧ್ಯಕ್ಷ ಡಾ.ಸದಾನಂದ ಪೂಜಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಎಸ್ಟರ್ ಆಸ್ಪತ್ರೆಯ ಅರ್ಭುದ ರೋಗ ಶಾಸ್ತ್ರ ವಿಭಾಗಿಯ ಮುಖ್ಯಸ್ಥ ಡಾ.ಸಿ.ಎನ್.ಪಾಟೀಲ್ ಅವರು ‘ಮಂಕುತಿಮ್ಮ ಹೇಳಿದ ಜೀವನಗಳ ಸತ್ಯಗಳು’ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಸಿ. ಎನ್. ಪಾಟೀಲ್ ವರನ್ನು ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆ ಮತ್ತು ಅಪ್ರತಿಮ ಸಾಧನೆಯನ್ನು ಪರಿಗಣಿಸಿ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
ಭಾರತೀಯ ವೈದ್ಯಕೀಯ ಸಂಘ ರಾಜ್ಯ ಶಾಖೆಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ.ಅಣ್ಣಯ್ಯ ಕುಲಾಲ್ ಅವರನ್ನು ಗೌರವಿಸಲಾಯಿತು.
ವೆನ್ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಹಾಗೂ ಆಧೀಕ್ಷಕ ಡಾ.ಶಿವಪ್ರಕಾಶ್, ಎಜೆ ಆಸ್ಪತ್ರೆಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ, ವಿನಯ ಆಸ್ಪತ್ರೆಯ ನಿರ್ದೇಶಕ ಡಾ. ಹಂಸರಾಜ್ ಆಳ್ವ ಮತ್ತು ಸಂಘದ ಕೋಶಾಧಿಕಾರಿ ಡಾ. ಜೂಲಿಯನ್ ಸಲ್ಡಾನ್ಹ ಉಪಸ್ಥಿತರಿದ್ದರು.
ಡಾ.ಮಧುರಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರಕಾಶ್ ಹರೀಶ್ಚಂದ್ರ ವಂದಿಸಿದರು.







