Mangaluru | ಸಜೀಪ ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ

ಮಂಗಳೂರು, ಡಿ.7: ಸಜೀಪ ಮೂಡದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಸಮಾರಂಭದಲ್ಲಿ ಸಜೀಪ ಮಾಗಣೆತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್.ಜೈರಾಬಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್ ಶ್ರೀಕಾಂತ್ ಶೆಟ್ಟಿ, ಉಪ ಪ್ರಾಂಶುಪಾಲೆ ಜ್ಯೋತಿ, ಉಪನ್ಯಾಸಕರಾದ ಸಂಧ್ಯಾ, ಭಾರತಿ, ಗಾಯತ್ರಿ, ಸುರೇಶ್ ಐತಾಳ್, ಶೋಭಾ, ಬಾಲಕೃಷ್ಣ ನಾಯಕ್, ಸುಂದರಿ, ಬಾಲಕೃಷ್ಣ ಎನ್ವಿ, ಗ್ರಾ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ್ ಬೆಲ್ಚಡ, ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ , ಪಂಚಾಯತ್ ಸದಸ್ಯರಾದ ಸೀತಾರಾಮ ಅಗೋಳಿ ಬೆಟ್ಟ, ಜಯಪ್ರಕಾಶ್ ಪೆರ್ವ, ಸುರೇಶ್ ಬಂಗೇರ , ನಿತಿನ್ ಅರಸ, ವಿಶ್ವನಾಥ ಕೊಟ್ಟಾರಿ , ಸುರೇಶ್ ಶೆಟ್ಟಿ, ಕೆ ವೀರೇಂದ್ರ ಕುಮಾರ್, ಉಪಸ್ಥಿತರಿದ್ದರು.
Next Story





