ಮಂಗಳೂರು | ಯುವತಿ ನಾಪತ್ತೆ : ಪ್ರಕರಣ ದಾಖಲು

ಮಂಗಳೂರು, ಡಿ.9: ನಗರದ ಶೇಡಿಗುರಿ ಅಶೋಕ ನಗರದ ಸತೀಶ್ ಕುಮಾರ್ ಪಿ.ಕೆ. ಎಂಬವರ ಪುತ್ರಿ ಮುಂಬೈಯಲ್ಲಿ ವಾಸವಾಗಿದ್ದ ಶ್ರದ್ಧಾ (27) ಎಂಬಾಕೆ ಡಿ.1ರಿಂದ ನಾಪತ್ತೆಯಾಗಿರುವ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
14 ವರ್ಷ ಪ್ರಾಯದಲ್ಲಿ ಒಬೆಸ್ಸಿವ್ ಕಂಪಸ್ಲಿವ್ ಡಿಸ್ ಆರ್ಡರ್ (ಒಸಿಡಿ) ಕಾಯಿಲೆಯಿಂದ ಶ್ರದ್ಧಾ ಬಳಲುತ್ತಿದ್ದರು. ಈ ಬಗ್ಗೆ ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆಕೆಯ ಇಚ್ಚೆಯಂತೆ 2 ವರ್ಷಗಳಿಂದ ಮುಂಬೈಯಲ್ಲಿ ನೆಲೆಸಿದ್ದರು. ಡಿ.1ರಂದು ಆಕೆ ಮುಂಬೈಯಲ್ಲಿಯೂ ಇರದೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಪ್ರಸ್ತುತ ಆಕೆ ಲೇಹಾದಲ್ಲಿರುವುದು ಆಕೆಯು ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡಿರುವುದರಿಂದ ತಿಳಿದು ಬಂದಿದೆ.
ಆಕೆಯ ಆರೋಗ್ಯದ ದೃಷ್ಟಿಯಿಂದ ಆಕೆಯನ್ನು ಬೆಂಗಳೂರಿನ ಮಾನಸಿಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲು ಇರುವುದರಿಂದ ಆಕೆಯನ್ನು ಪತ್ತೆಮಾಡಿ ಕೊಡುವಂತೆ ದೂರಿನಲ್ಲಿ ತಿಳಿಸಲಾಗಿದೆ.
Next Story





