ಸರಕಾರದ ಸವಲತ್ತನ್ನು ಸಕಾಲದಲ್ಲಿ ಅಸಂಘಟಿತರಿಗೆ ತಲುಪಿಸಲು ಶ್ರಮಿಸಬೇಕಾಗಿದೆ: ಅಬ್ಬಾಸ್ ಅಲಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಐಕಾರ್ಮಿಕ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯು ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸಿದ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಮಾತ ನಾಡಿ, ತಾವೆಲ್ಲರೂ ಮುಂದಿನ ದಿನಗಳಲ್ಲಿ ಬ್ಲಾಕ್ ಮಟ್ಟದ ಮಾಸಿಕ ಸಭೆಯನ್ನು ನಡೆಸುವಂತೆ ಹಾಗೂ ಸರಕಾರದ ಕಾರ್ಯಕ್ರಮವನ್ನು ಕಾರ್ಮಿಕ ವರ್ಗಕ್ಕೆ ತಲುಪುವಂತೆ ನೋಡಿಕೊಳ್ಳುವ ಜವಾಬ್ದಾರಿಯ ಜೊತೆಗೆ ಮತ್ತಷ್ಟು ಕ್ರಿಯಾ ಶೀಲರಾಗುವಂತೆ ಕರೆ ನೀಡಿದರು.
ಪದಾಧಿಕಾರಿ ಸುದರ್ಶನ್ ನಾಯಕ್ ಮಾತನಾಡಿ, ಕಾರ್ಮಿಕ ಸಮುದಾಯಕ್ಕೆ ನ್ಯಾಯ ಒದಗಿಸುವ ಉದ್ದೇಶದಿಂದ ನಾವೆಲ್ಲ ಜೊತೆಯಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಇಸ್ಮಾಯಿಲ್ ನಾಟೆಕಲ್ ಅವರು ಅಸಂಘಟಿತ ಕಾರ್ಮಿಕರ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಅರುಣ್ ಶೆಟ್ಟಿ ನರಿಕೊಂಬು ಪಕ್ಷ ಸಂಘಟನೆ ಬಗ್ಗೆ ಮಾಹಿತಿ ನೀಡಿದರು.
ಪದಾಧಿಕಾರಿಗಳಾದ ತುಕಾರಾಂ ಗೌಡ, ಜಾರ್ಜ್ ಎಂ ವಿ, ಪ್ರಮೋದ್, ನಾರಾಯಣ್ ಪೂಜಾರಿ, ಸದಾಶಿವ ಹೆಗಡೆ, ಲ್ಯಾನ್ಸಿ ಪಿಯು, ಐಸಾ ಪ್ರಕಾಶ್, ಸುಲೇಮಾನ್ ತೆಕ್ಕರು, ಎಂ ಕುಂಞಿ ಬಾವಾ, ಎ ಕೆ ಬಶೀರ್ ಆತೂರು, ರಾಜೇಶ್, ಸುರೇಶ್ ಲಾಯಿಲಾ, ಪ್ರಶಾಂತ್ ಅಮೀನ್, ಮಧು ರೈ, ಜಯಾನಂದ ಪಿ, ಅಬ್ದುಲ್ ಬಶೀರ್, ಸಿರಾಜ್ ಗುರುಪುರ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. ಜೆಸಿಂತಾ ಸ್ವಾಗತಿಸಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ನಿರಂಜನ್ ರೈ ವಂದಿಸಿದರು.