ಕಲ್ಲಡ್ಕ: ಮುಹಿಯುದ್ದೀನ್ ಜುಮಾ ಮಸೀದಿಯ ಮಹಾಸಭೆ, ಪದಾಧಿಕಾರಿಗಳ ಆಯ್ಕೆ
ಅಬ್ದುಲ್ಲಾ ಹಾಜಿ
ಬಂಟ್ವಾಳ : ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಮಹಾ ಸಭೆಯು ಇಲ್ಲಿನ ಮುನೀರುಲ್ ಇಸ್ಲಾಂ ಮದ್ರಸ ಹಾಲ್ ನಲ್ಲಿ ನಡೆಯಿತು.
ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ ಗೋಳ್ತಮಜಲು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹಾಸಭೆಯಲ್ಲಿ ಸ್ಥಳೀಯ ಖತೀಬ್ ಕೆ.ಎಸ್ ಉಸ್ಮಾನ್ ದಾರಿಮಿ ರವರು ದುಹಾಶೀರ್ವಚನಗೈದರು.
ಕಾರ್ಯದರ್ಶಿ ಹಾಜಿ ಅಬೂಬಕ್ಕರ್ ಸಾಹೇಬ್ ವಾರ್ಷಿಕ ವರದಿ ಮಂಡಸಿದರು. ಸದಸ್ಯ ಆಬ್ದುಲ್ ಹಮೀದ್ ಗೋಳ್ತಮಜಲು ನಿರೂಪಿಸಿದರು.
ಇದೇ ವೇಳೆ ಮುಂದಿನ ಅವಧಿಗೆ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಬ್ದುಲ್ಲಾ ಹಾಜಿ ಕೋಡಿ, ಉಪಾಧ್ಯಕ್ಷರಾಗಿ ಅಬೂಬಕ್ಕರ್ ಮುರಬೈಲ್, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಸಿದ್ದೀಖ್ ಪನಾಮಾ, ಜೊತೆ ಕಾರ್ಯದರ್ಶಿಯಾಗಿ ಸಾದಿಕ್ ಕಲ್ಲಡ್ಕ, ಕೋಶಾಧಿಕಾರಿಯಾಗಿ ಜವಾಝ್ ಜೆ.ಕೆ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಲತೀಫ್ ಕೆ.ಸಿ ರೋಡ್, ದಾವುದ್ ಮಾಣಿಮಜಲು, ಝಕರಿಯಾ ಗೋಳ್ತಮಜಲು, ಇಬ್ರಾಹಿಂ ಸರಪಾಡಿ, ಕಾಸಿಂ ಕೆ.ಸಿ ರೋಡ್, ಫವಾಜ್ ಕೆ.ಸಿ ರೋಡ್ ಆಯ್ಕೆಗೊಂಡರು.
Next Story