ಮೂಡುಬಿದಿರೆ: "ಸರ್ವ ಧರ್ಮ ಅರಿವು" ಕಾರ್ಯಕ್ರಮ
ಮೂಡುಬಿದಿರೆ: ಎಲ್ಲಾ ಧರ್ಮಗಳ ಮೂಲ ತತ್ವ ಒಂದೇ ಆಗಿದ್ದು, ಅದನ್ನು ಉಳಿಸು ಕೆಲಸ ನಮ್ಮಿಂದ ಆಗಬೇಕೆಂದು ಸಾಲುಮರದ ತಿಮ್ಮಕ್ಕ ರಾಷ್ತ್ರೀಯ ಪ್ರಶಸ್ತಿ ಪುರಸ್ಕೃತೆ ರೆಹಾನಾ ಬೇಗಂ ಹೇಳಿದ್ದಾರೆ.
ಅವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆ೦ಟ್ ವಿದ್ಯಾ ಸಂಸ್ಥೆಯಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಹಮ್ಮಿ ಕೊಂಡಿದ್ದ "ಸರ್ವ ಧರ್ಮ ಅರಿವು" ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಪ್ರತಿಯೊಂದು ಧರ್ಮವು ತನ್ನದೇ ಆತ ತತ್ವವನ್ನು ಹೊ೦ದಿದೆ. ಆದರೆ ಅವೆಲ್ಲವುಗಳ ಮೂಲ ಆಶಯ ಒಂದೇ ಆಗಿದೆ. ಎಲ್ಲಾ ದೃಷ್ಟಿಕೋನಗಳಿಂದ ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಅದರ ನಿಜವಾದ ಅರ್ಥಗ್ರಹಣವಾಗಲು ಸಾಧ್ಯ. ಎಲ್ಲಾ ಧರ್ಮಗಳ ಅಧಾರ ಅಹಿಂಸೆ, ಸಹಾನುಭೂತಿ, ಸಹಿಷ್ಣುತೆ ಮತ್ತು ಸತ್ಯ ಎಂದರು.
ಬಿ.ಇ.ಸಿ/ಎಸ್.ಸಿ.ಸಿ ಯ ನಿರ್ದೇಶಕರಾದ ವಂದನೀಯ ಗುರು ಸುನಿಲ್ ಜಾರ್ಜ್ ಡಿ’ಸೋಜಾ ಅವರು ಕ್ರೈಸ್ತ ಧರ್ಮದ ಅರಿವು ಮೂಡಿಸಿದರೆ, ಹಿಂದೂ ಧರ್ಮದ ಕುರಿತು ಸಾಂಸ್ಕೃತಿಕ ಚಿಂತಕ ಪುತ್ತಿಗೆ ಬಾಲಕೃಷ್ಣ ಭಟ್ ಮಾಹಿತಿ ಹಂಚಿಕೊಂಡರು.
ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತ ನಿರ್ದೇಶಕ ಡಾ ಸಂಪತ್ ಕುಮಾರ್ ಉಜಿರೆ, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್, ಸಿಬಿಎಸ್ಸಿ ಶಾಲೆಯ ಪ್ರಾ೦ಶುಪಾಲ ಸುರೇಶ್ ಉಪಸ್ಥಿತರಿದ್ದರು. ಎಕ್ಸಲೆ೦ಟ್ ಶಿಕ್ಷಣ ಸ೦ಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಹರೀಶ್ ಎಂ. ವ೦ದಿಸಿದರು. ಡಾ. ವಾದಿರಾಜ ನಿರೂಪಿಸಿದರು.