ಅಡ್ಡೂರು ಸರಕಾರಿ ಶಾಲೆ ನವೀಕರಿಸಲು ಒತ್ತಾಯ: ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಕೆ

ಗುರುಪುರ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನವೀಕರಿಸಲು ಹಾಗೂ ವಿವಿಧ ಅಭಿವೃದ್ಧಿ ಬೇಡಿಕೆಗಳನ್ನು ಮುಂದಿಟ್ಟು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ನಾಸಿರ್ ನೇತೃತ್ವದ ನಿಯೋಗವು ಬುಧವಾರ ಭೇಟಿ ನೀಡಿ ಮನವಿ ಸಲ್ಲಿಸಿತು.
ಈ ಸಂಧರ್ಭದಲ್ಲಿ ಗುರುಪುರ ಗ್ರಾಮ ಪಂಚಾಯತ್ ಸದಸ್ಯರುಗಳಾದ ಬುಶ್ರಾ ಅನ್ವರ್, ಮರಿಯಮ್ ಹನೀಫ್, ಎ.ಕೆ. ರಿಯಾಝ್, ಮಹಮ್ಮದ್ ಅಶ್ರಫ್, ಮನ್ಸೂರ್ ಟಿಬೆಟ್, ಶಾಹಿಕ್ ಪಾಂಡೇಲ್, ಎಸ್ಡಿಪಿಐ ಮಂಗಳೂರು ಉತ್ತರ ಕ್ಷೇತ್ರ ಕಾರ್ಯದರ್ಶಿ ಇಮ್ತಿಯಾಝ್ ಅಡ್ಡೂರು, ಗುರುಪುರ ಗ್ರಾಮ ಸಮಿತಿ ಕಾರ್ಯದರ್ಶಿ ಆಸಿರ್ ಅಂಗಡಿಮನೆ, ಅನ್ವರ್ ಗೋಳಿಪಡ್ಪು, ಸಲಾಂ ಅಡ್ಡೂರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Next Story