ರಾಜ್ಯ ಸಾಹಿತ್ಯ ಚಿಗುರು ಬಳಗದ ಕವನ ರಚನೆ ಸ್ಪರ್ಧೆಯ ಫಲಿತಾಂಶ ಪ್ರಕಟ
ಮಂಗಳೂರು.ನ.4: ಉಪನ್ಯಾಸಕ ನಿಯಾಝ್ ಪಡೀಲ್ ಹಾಗೂ ಎಂ.ಡಿ.ಮಂಚಿ ನೇತೃತ್ವದ ರಾಜ್ಯ ಸಾಹಿತ್ಯ ಚಿಗುರು ಬಳಗ ಮಂಗಳೂರು ವರ್ಷಂಪ್ರತಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಳ್ಳುತ್ತಿರುವ ರಾಜ್ಯಮಟ್ಟದ ಕವನ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಎಸ್.ಎಲ್. ವರಲಕ್ಷ್ಮಿ ಮಂಜುನಾಥ್ ಮೈಸೂರು (ಪ್ರಥಮ- ಚಿನ್ನದ ನಾಣ್ಯ), ಕುಮಾರ ಚಲುವಾದಿ ಹಾಸನ ಹಾಗೂ ಡಾ.ಸುರೇಶ ನೆಗಳಗುಳಿ ಮಂಗಳೂರು (ದ್ವಿತೀಯ-ಬೆಳ್ಳಿಯ ನಾಣ್ಯ) ಎಂ.ಪಿ.ಎಂ. ಕೊಟ್ರಯ್ಯ ಜಯನಗರ ಹಾಗೂ ಯೋಗೀಶ್ ಪೇರೆಂದಡ್ಕ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ಮಂಜುಳ ಬಿ.ಕೆ ತುಮಕೂರು, ಸುಮಲತಾ ಡಿ.ನಾಯ್ಕ್ ಉತ್ತರ ಕನ್ನಡ, ಮಧುಮಾಲ ತಿರುದ್ರೇಶ್ ಬೇಲೂರು, ಯು.ಸಿರಾಜ್ ಅಹ್ಮದ್ ಸಿರಬ ಬೆಂಗಳೂರು, ರಮೇಶ್ ಮೆಲ್ಕಾರ್, ಲಕ್ಷ್ಮಿ ದ.ಕ., ಫೌಝಿಯಾ ಹರ್ಷದ್ ಮೂಡುಬಿದಿರೆ ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡಿರುತ್ತಾರೆ.
Next Story





