ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಕೌನ್ಸಿಲರ್ಸ್ ಕಾನ್‌ಕ್ಲೇವ್

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಬೆಳ್ತಂಗಡಿ ಝೋನ್ ವ್ಯಾಪ್ತಿಯ 7 ಸರ್ಕಲ್‌ಗಳ ಕೌನ್ಸಿಲರ್ ಗಳನ್ನು ಸೇರಿಸಿ ಕೌನ್ಸಿಲರ್ಸ್ ಕಾನ್‌ಕ್ಲೇವ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿ ಆಲಂದಿಲ ರವರ ಅಧ್ಯಕ್ಷತೆಯಲ್ಲಿ 2025 ನವೆಂಬರ್ 2 ರವಿವಾರ ಹಯಾತುಲ್ ಅವುಲಿಯ ದರ್ಗಾ ಶರೀಫ್ ಕಾಜೂರು ನಲ್ಲಿ ದರ್ಗಾ ಝಿಯಾರತ್ ನೊಂದಿಗೆ ಚಾಲನೆ ನೀಡಲಾಯಿತು.
ಎಸ್.ವೈ.ಎಸ್ ಝೋನ್ ಕೋಶಾಧಿಕಾರಿ ಅಬ್ದುಲ್ ರಝಕ್ ಸಖಾಫಿ ಮಡಂತ್ಯಾರ್ ಕಾರ್ಯಕ್ರಮ ವನ್ನು ಉದ್ಘಾಟಿ ಸಿದರು, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎಸ್.ವೈ.ಎಸ್ ಜಿಲ್ಲಾ ಅಧ್ಯಕ್ಷರಾದ ಅಶ್ರಫ್ ಸಖಾಫಿ ಮಾಡವು ರವರಿಂದ ಕೌನ್ಸಿಲರ್ಸ್ ಕಾನ್‌ಕ್ಲೇವ್ ಕಾರ್ಯಕ್ರಮ ನಡೆಸಿದರು.
ಜಿಲ್ಲಾ ಉಪಾಧ್ಯಕ್ಷರಾದ ಉಸ್ಮಾನ್ ಸೋಕಿಲ ರವರು ಅವಲೋಕನ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು
ಜಿಲ್ಲಾ ನಾಯಕರಾದ ನಝೀರ್ ಪೆರ್ದಾಡಿ,ಉಪಾಧ್ಯಕ್ಷರುಗಳಾದ ಅಯ್ಯೂಬ್ ಮಹ್ಳರೀ,ಕೆ ವೈ ಇಸ್ಮಾಯಿಲ್,ಕಾರ್ಯದರ್ಶಿಗಳಾದ ಅಝೀಝ್ ಕಾಜೂರು,ಆಶ್ರಫ್ ಎಂ ಎಚ್, ಸಿದ್ದೀಕ್ ಪರಪ್ಪು,ಹಾರಿಸ್ ಕುಕ್ಕುಡಿ,ಝೋನ್ ನಾಯಕರಾದ ನಝೀರ್ ಮದನಿ ,ಝಮಿರ್ ಸಅದಿ ,ಹಸೈನಾರ್ ಹಾಜಿ , ಸಲೀಂ ಮಾಚಾರು,ಹಮೀದ್ ಸಅದಿ,ರಿಯಾಝ್ ಏರ್ಮಾಳ,ನಝೀರ್ ಕಾಂತಿಜಾಲ್,ನಿಝಮುದ್ದೀನ್ ಜಿ ಎಚ್ ,ಹನೀಫ್ ಬಾಹಸನಿ,ಅಶ್ರಫ್ ಹಿಮಮಿ,ಮುಸ್ತಫಾ ಸಅದಿ ,ನಾಸಿರ್ ನಾವೂರ್, ಇಕ್ಬಾಲ್ ಮಾಚಾರ್ ಸ್ಥಳೀಯ ಕಾಜೂರ್ ಕರ್ನಾಟಕ ಮುಸ್ಲಿಂ ಜಮಾಅತ್ &ಎಸ್.ವ್ಯೆ. ಎಸ್ ಯುನಿಟ್ ನಾಯಕರು ಹಾಗೂ 7 ಸರ್ಕಲ್ ಗಳಿಂದ ಆಗಮಿಸಿದ ಕೌನ್ಸಿಲರ್ ಗಳು ಉಪಸ್ಥಿತರಿದ್ದರು
ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ಸ್ವಾಗತಿಸಿದರು,ಉಪಾದ್ಯಕ್ಷರಾದ ಜಮಲುದ್ದಿನ್ ಲತೀಫಿ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು







