ರಾಜಸ್ಥಾನ: ಹಳಿ ತಪ್ಪಿದ ಎಕ್ಸ್ ಪ್ರೆಸ್ ರೈಲಿನ ಎರಡು ಬೋಗಿಗಳು
Photo: ANI
ಕೋಟಾ (ರಾಜಸ್ಥಾನ): ಭೋಪಾಲ್ ಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ರೈಲೊಂದರ ಎರಡು ಬೋಗಿಗಳು ರಾಜಸ್ಥಾನದ ಕೋಟಾ ಬಳಿ ಶುಕ್ರವಾರ ಸಂಜೆ ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಈ ಅಪಘಾತದಲ್ಲಿ ತಕ್ಷಣಕ್ಕೆ ಯಾವುದೇ ಗಾಯಾಳುಗಳ ವರದಿಯಾಗಿಲ್ಲ.
ರೈಲ್ವೆ ಅಧಿಕಾರಿಗಳ ಪ್ರಕಾರ, ಜೋಧ್ ಪುರ್-ಭೋಪಾಲ್ ಗೆ ತೆರಳುತ್ತಿದ್ದ ರೈಲು ಸಂಖ್ಯೆ 14813ರ ಎರಡು ಬೋಗಿಗಳು ಕೋಟಾ ಜಂಕ್ಷನ್ ಬಳಿ ಹಳಿ ತಪ್ಪಿವೆ. ಈ ಘಟನೆಯ ಬೆನ್ನಿಗೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಲಾಗಿದೆ.
ಕೋಟಾದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು 0744-246717, 0744-2467172, 9001017097, 9414018692 ತುರ್ತು ಸಹಾಯವಾಣಿಯನ್ನು ಪ್ರಯಾಣಿಕರಿಗಾಗಿ ಬಿಡುಗಡೆ ಮಾಡಿದ್ದಾರೆ.
Next Story