ದೆಹಲಿಯ ಇಸ್ರೇಲ್ ದೂತವಾಸ ಕಚೇರಿ ಬಳಿ ಸ್ಫೋಟ
Photo: twitter.com/News2406
ಹೊಸದಿಲ್ಲಿ: ಲುಟಿನ್ಸ್ ಝೋನ್ ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಬಳಿ ಮಂಗಳವಾರ ಸಂಜೆ ಕಡಿಮೆ ತೀವ್ರತೆಯ ಸ್ಫೋಟದ ಸದ್ದು ಕೇಳಿ ಬಂದಿದ್ದು, ಭಾರತೀಯ ಭದ್ರತಾ ಪಡೆ ಮತ್ತು ಗುಪ್ತಚರ ಏಜೆನ್ಸಿಗಳಲ್ಲಿ ಕಳವಳಕ್ಕೆ ಕಾರಣವಾಗಿದೆ.
ಈ ಘಟನೆಯ ಬೆನ್ನಲ್ಲೇ ಇಡೀ ಪ್ರದೇಶದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಅಥವಾ ಆಸ್ತಿಪಾಸ್ತಿಗೆ ಯಾವುದೇ ಹಾನಿ ಆಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸ್ಫೋಟದ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ಭದ್ರತಾ ಪಡೆಗಳನ್ನು ಕಟ್ಟೆಚ್ಚರದ ಸ್ಥಿತಿಯಲ್ಲಿ ಇರಿಸಲಾಗಿದೆ.
ಮೂರು ವರ್ಷ ಹಿಂದೆ ಗಣರಾಜ್ಯೋತ್ಸವ ನಡೆದ ವಾರದಲ್ಲಿ ಇಸ್ರೇಲಿ ರಾಯಭಾರ ಕಚೇರಿ ಬಳಿ ಇಂಥದ್ದೇ ಸ್ಫೋಟ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಎಪಿಜೆ ಅಬ್ದುಲ್ ಕಲಾಂ ರಸ್ತೆಯ ಬಳಿ ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಇಸ್ರೇಲಿ ರಾಯಭಾರ ಕಚೇರಿ ಈ ಸ್ಫೋಟವನ್ನು ದೃಢಪಡಿಸಿದ್ದು, ತೀರಾ ಸನಿಹದಲ್ಲಿ ಸ್ಫೋಟ ಸಂಭವಿಸಿದೆ ಎಂದು ಹೇಳಿದೆ.
"ಮಂಗಳವಾರ ಸಂಜೆ 5 ಗಂಟೆಯ ಬಳಿಕ ರಾಯಭಾರ ಕಚೇರಿ ಬಳಿ ಸ್ಫೋಟ ಸಂಭವಿಸಿದೆ. ನಮ್ಮ ಎಲ್ಲ ಉದ್ಯೋಗಿಗಳು ಸುರಕ್ಷಿತವಾಗಿದ್ದು, ಎಲ್ಲ ರಾಜತಾಂತ್ರಿಕರೂ ಸುರಕ್ಷಿತವಾಗಿದ್ದಾರೆ. ನಮ್ಮ ಭದ್ರತಾ ತಂಡಗಳು ಸ್ಥಳೀಯ ದೆಹಲಿ ಭದ್ರತಾ ಪಡೆಗಳ ಜತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಮತ್ತಷ್ಟು ತನಿಖೆ ನಡೆಯುತ್ತಿದೆ ಎಂದು ಇಸ್ರೇಲ್ ಮಿಷನ್ ನ ಉಪಮುಖ್ಯಸ್ಥ ಒಹಾದ್ ನಕಾಶ್ ಕೈನರ್ ಹೇಳಿದ್ದಾರೆ.
Breaking: | #India
— Crime Reports India (@AsianDigest) December 26, 2023
An explosion took place near the Israeli embassy in New Delhi;Delhi Police officials launch probe.#Israel #Palestine
pic.twitter.com/Wni4t0KUZV