ತನಗಾಗಿ ಬೇಡುವುದಕ್ಕಿಂತ ಸಾಯುವುದೇ ಲೇಸು: ಶಿವರಾಜ್ ಸಿಂಗ್ ಚೌಹಾಣ್
ಕಣ್ಣೀರಿಟ್ಟ ಮಹಿಳಾಭಿಮಾನಿಗಳನ್ನು ಸಂತೈಸಿದ ನಿರ್ಗಮಿತ ಸಿಎಂ
ಮೋಹನ್ ಯಾದವ್ | Photo : X
ಭೋಪಾಲ್: ಮಧ್ಯಪ್ರದೇಶ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಅವರು ಆಯ್ಕೆಯಾದ ಬಳಿಕ ಶಿವರಾಜ್ ಸಿಂಗ್ ಚೌಹಾಣ್ ಸೋಮವಾರ ರಾಜ್ಯಪಾಲ ಮಂಗುಭಾಯ್ ಪಟೇಲ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ದೀರ್ಘ ಕಾಲ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜಿನಾಮೆ ನೀಡಿರುವುದು ಅವರ ಅಭಿಮಾನಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಮಂಗಳವಾರ ಚೌಹಾಣ್ ಅವರ ನಿವಾಸಕೆ ಭೇಟಿ ನೀಡಿದ್ದ ಅವರ ಮಹಿಳಾ ಅಭಿಮಾನಿಗಳು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದು, ನಿರ್ಗಮಿತ ಮುಖ್ಯಮಂತ್ರಿ ಎದುರಲ್ಲಿ ಕಣ್ಣೀರು ಹಾಕಿದ್ದಾರೆ.
ನಾವು ನಿಮಗೆ ಮತ ಹಾಕಿದ್ದೇವೆ, ನೀವು ರಾಜಿನಾಮೆ ನೀಡಬಾರದು ಎಂದು ಕಣ್ಣೀರು ಹಾಕಿದ ಮಹಿಳೆಯರನ್ನು ಚೌಹಾಣ್ ಅವರು ಸಮಾಧಾನಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಅದಾಗ್ಯೂ, ರಾಜಿನಾಮೆ ನೀಡುವ ತನ್ನ ನಿರ್ಧಾರ ತೃಪ್ತಿ ತಂದಿದೆ ಎಂದು ಚೌಹಾಣ್ ಹೇಳಿದ್ದಾರೆ.
"ನನಗೆ ತುಂಬಾ ತೃಪ್ತಿಯಿದೆ, ನಾನು 2005 ರಲ್ಲಿ ಮುಖ್ಯಮಂತ್ರಿಯಾದೆ, ಉಮಾಭಾರತಿ ಅವರ ಕಠಿಣ ಪರಿಶ್ರಮದಿಂದ ಆ ಸರ್ಕಾರ ರಚನೆಯಾಗಿತ್ತು. ನಾನು ಈಗ ನನಗಾಗಿ ಏನನ್ನಾದರೂ ಕೇಳುವುದಕ್ಕಿಂತ ಸಾಯುವುದೇ ಮೇಲು. ಇವತ್ತು ನಾನು ಇಲ್ಲಿಂದ ವಿದಾಯ ಹೇಳುತ್ತಿದ್ದೇನೆ. ನನ್ನ ಹೃದಯ ಸಂತೋಷ ಮತ್ತು ತೃಪ್ತಿಯಿಂದ ತುಂಬಿದೆ” ಎಂದು ಶಿವರಾಜ್ ಸಿಂಗ್ ಚೌಹಾಣ್ ತಮ್ಮ ವಿದಾಯ ಭಾಷಣದಲ್ಲಿ ಹೇಳಿದ್ದಾರೆ.
This is a stunt of Shivraj Singh Chouhan who is challenging Delhi,
— Harshvardhan tiwari (@poetvardhan) December 12, 2023
He said today that he is not going to Delhi, when someone else has become the CM, what will he do in MP ?
All the answers are in this question.
Shivraj is planning something big in MP.pic.twitter.com/AFdxLbJqHl