ಛತ್ತೀಸ್ಗಢ ಮತದಾನೋತ್ತರ ಸಮೀಕ್ಷೆ: ಕಾಂಗ್ರೆಸ್ ಕೈಗೆ ಮತ್ತೆ ಆಡಳಿತ ಸಾಧ್ಯತೆ
ರಾಯಪುರ: ಜಿದ್ದಾಜಿದ್ದಿನ ಚುನಾವಣಾ ಕಣವಾಗಿದ್ದ ಛತ್ತೀಸ್ಗಢದಲ್ಲಿ ಮತದಾರರು ಕಾಂಗ್ರೆಸ್ ಪರ ಒಲವು ತೋರಿರುವುದಾಗಿ ಮತದಾನೋತ್ತರ ಸಮೀಕ್ಷೆ ಹೇಳಿದೆ. ಚುನಾವಣೆಗೆ ಮುಂಚಿತವಾಗಿ ಮಹಾದೇವ ಬೆಟ್ಟಿಂಗ್ ಆಪ್ ಪ್ರಕರಣ ಸೇರಿದಂತೆ ಈಡಿ ದಾಳಿಯಿಂದಾಗಿ ಛತ್ತೀಸ್ಗಢ ಚುನಾವಣಾ ಕಣ ಗಮನ ಸೆಳೆದಿತ್ತು.
ರಿಪಬ್ಲಿಕ್ ಟಿವಿ Matrize ಎಕ್ಸಿಟ್ ಪೋಲ್ ಸಮೀಕ್ಷೆ ಕಾಂಗ್ರೆಸ್ ಬಹುಮತ ಸಾಧಿಸಬಹುದೆಂದು ಹೇಳಿದೆ. ಕಾಂಗ್ರೆಸ್ 44-52 ಸ್ಥಾನ ಗೆದ್ದರೆ, ಬಿಜೆಪಿ 34-42 ಸ್ಥಾನಗಳಲ್ಲಿ ವಿಜಯಿಯಾಗಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.
Axis My India ಸಮೀಕ್ಷೆ ಪರ ಕಾಂಗ್ರೆಸ್ಗೆ 42% ಮತ ಹಂಚಿಕೆಯಾಗಿದ್ದು, 41% ಮತಹಂಚಿಕೆ ಬಿಜೆಪಿ ಪರ ಆಗಿದೆ ಎಂದು ಹೇಳಿದೆ.
ಚತ್ತೀಸಗಢದ 31% ಮತದಾರರು ಭೂಪೇಶ್ ಬಘೇಲ್ ಅವರನ್ನು ಆಯ್ಕೆ ಮಾಡಿದ್ದು, 21% ಮತದಾರರು ಬಿಜೆಪಿಯ ರಮಣ ಸಿಂಗ್ ಅವರ ಪರ ಒಲವು ತೋರಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
Next Story