ಸುಪ್ರೀಂ ಕೋರ್ಟಿನ ಪ್ರಥಮ ಮಹಿಳಾ ನ್ಯಾಯಮೂರ್ತಿ ಫಾತಿಮಾ ಬೀವಿ ನಿಧನ
ಫಾತಿಮಾ ಬೀವಿ (Photo: livemint.com)
ಕೊಲ್ಲಂ: ಸುಪ್ರೀಂ ಕೋರ್ಟಿನ ಪ್ರಥಮ ಮಹಿಳಾ ನ್ಯಾಯಾಧೀಶೆ ಮತ್ತು ತಮಿಳುನಾಡಿನ ಮಾಜಿ ರಾಜ್ಯಪಾಲೆ ನ್ಯಾಯಮೂರ್ತಿ ಫಾತಿಮಾ ಬೀವಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.
ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ನ್ಯಾಯಮೂರ್ತಿ ಫಾತಿಮಾ ಬೀವಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
“ಸುಪ್ರೀಂ ಕೋರ್ಟಿನ ಪ್ರಥಮ ಮಹಿಳಾ ನ್ಯಾಯಾಧೀಶೆಯಾಗಿದ್ದ ಆಕೆ ಧೀರ ಮಹಿಳೆಯಾಗಿದ್ದರು ಹಾಗೂ ಹಲವು ದಾಖಲೆಗಳನ್ನು ಹೊಂದಿದ್ದರು. ಯಾವುದೇ ಸವಾಲುಗಳನ್ನು ನಮ್ಮ ಮನೋಬಲ ಮತ್ತು ದೃಢ ಧ್ಯೇಯದೊಂದಿಗೆ ಎದುರಿಸಬಹುದೆಂದು ಅವರು ತಮ್ಮ ಜೀವನದ ಮೂಲಕ ಸಾಧಿಸಿ ತೋರಿಸಿದ್ದರು,” ಎಂದು ವೀಣಾ ಜಾರ್ಜ್ ಹೇಳಿಕೆಯೊಂದರಲ್ಲಿ ತಿಳಿಸಿದ್ದರು.
Next Story