ಟೈಲರ್ ಕಣ್ಣಯ್ಯ ಲಾಲ್ ಕೊಲೆ ಪ್ರಕರಣದ ಆರೋಪಿಗೆ ಜಾಮೀನು
PC : abplive.com
ಜೈಪುರ: 2022ರಲ್ಲಿ ಉದಯಪುರದ ಟೈಲರ್ ಕಣ್ಣಯ್ಯ ಲಾಲ್ರನ್ನು ಅಮಾನುಷವಾಗಿ ಕೊಲೆಗೈದ ಪ್ರಕರಣದ ಆರೋಪಿ ಮುಹಮ್ಮದ್ ಜಾವೇದ್ಗೆ ರಾಜಸ್ಥಾನ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಜಾವೇದ್ನನ್ನು ಉದಯಪುರದಿಂದ 2022 ಜುಲೈ 22ರಂದು ಬಂಧಿಸಿತ್ತು.
ಆ ವರ್ಷದ ಜೂನ್ 28ರಂದು ಕಣ್ಣಯ್ಯ ಲಾಲ್ರನ್ನು ಅವರ ಅಂಗಡಿಯಲ್ಲಿ ರಿಯಾಝ್ ಅಟ್ಟಾರಿ ಮತ್ತು ಗೌಸ್ ಮುಹಮ್ಮದ್ ಎಂಬವರು ತಲೆಕಡಿದು ಅಮಾನುಷವಾಗಿ ಕೊಲೆಮಾಡಿದ್ದರು.
ಅಮಾನುಷ ಹತ್ಯೆಯ ಕೃತ್ಯವನ್ನು ಆರೋಪಿಗಳು ತಮ್ಮ ಮೊಬೈಲ್ ಫೋನ್ಗಳಲ್ಲಿ ಚಿತ್ರೀಕರಿಸಿದ್ದರು. ಅವರು ಪ್ರಧಾನಿ ನರೇಂದ್ರ ಮೋದಿಗೂ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಸ್ಥಳ ಪರಿಶೀಲನೆ ನಡೆಸಿ, ಕಣ್ಣಯ್ಯ ಲಾಲ್ ತನ್ನ ಅಂಗಡಿಯಲ್ಲೇ ಇದ್ದಾರೆ ಎನ್ನುವ ಮಾಹಿತಿಯನ್ನು ಇತರ ಆರೋಪಿಗಳಿಗೆ ಕಳುಹಿಸುವ ಮೂಲಕ ಜಾವೇದ್ ಈ ಕೊಲೆ ಪ್ರಕರಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾನೆ ಎಂದು ಎನ್ಐಎ ಹೇಳಿತ್ತು.
Next Story