ಖರ್ಗೆ - ನಿತೀಶ್ ಮತ್ತು ಇತರ ಮಿತ್ರಪಕ್ಷಗಳ ಜೊತೆ ನಿಕಟ ಸಂಪರ್ಕದಲ್ಲಿದ್ದಾರೆ ; ಇಂಡಿಯಾ’ಕ್ಕೆ ಸಂಚಾಲಕರ ನೇಮಕ ವದಂತಿ ನಡುವೆ ಕಾಂಗ್ರೆಸ್ ಹೇಳಿಕೆ
ಮಲ್ಲಿಕಾರ್ಜುನ ಖರ್ಗೆ | Photo; PTI
ಹೊಸದಿಲ್ಲಿ,: ಪ್ರತಿಪಕ್ಷಗಳ ಮೈತ್ರಿಕೂಟ ’ಇಂಡಿಯಾ’ ಗುಂಪಿನ ಸಂಚಾಲಕರನ್ನು ನೇಮಕಗೊಳಿಸಲಿದೆಯೇ ಎಂಬ ಊಹಾಪೋಹಗಳ ನಡುವೆಯೇ ಕಾಂಗ್ರೆಸ್, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನಿಕಟ ಸಮನ್ವಯವನ್ನು ಸಾಧಿಸಲು ಎಲ್ಲ ಮಿತ್ರಪಕ್ಷಗಳ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಬುಧವಾರ ಹೇಳಿದೆ.
ನಿಕಟ ಸಮನ್ವಯ ವ್ಯವಸ್ಥೆಯನ್ನು ಹೇಗೆ ಚೆನ್ನಾಗಿ ರೂಪಿಸಬಹುದು ಎಂಬ ಬಗ್ಗೆ ಖರ್ಗೆ ಮಿತ್ರಪಕ್ಷಗಳ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಈ ಬಗ್ಗೆ ಶೀಘ್ರವೇ ನಿರ್ಧಾರವು ಹೊರಗೆ ಬೀಳಲಿದೆ ಎಂದು ಎಐಸಿಸಿ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದರು.
ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ್ ಅವರನ್ನು ಇಂಡಿಯಾ ಮೈತ್ರಿಕೂಟದ ಸಂಚಾಲಕರನ್ನಾಗಿ ಮಾಡಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಕಾಂಗ್ರೆಸಿನ ಈ ಹೇಳಿಕೆ ಬಂದಿದೆ. ಮೈತ್ರಿಕೂಟದಲ್ಲಿ ತನ್ನನ್ನುಉಪೇಕ್ಷಿಸಲಾಗುತ್ತಿದೆ ಎಂದು ನಿತೀಶ್ ಅಸಮಾಧಾನಗೊಂಡಿದ್ದಾರೆ ಎಂಬ ಸೂಚನೆಗಳ ನಡುವೆಯೂ ಈ ಹೇಳಿಕೆಯು ಹೊರಬಿದ್ದಿದೆ. ಖರ್ಗೆ ಮಾತನಾಡಿರುವ ನಾಯಕರಲ್ಲಿ ನಿತೀಶ್ ಅವರೂ ಸೇರಿದ್ದಾರೆ ಎಂದು ಕಾಂಗ್ರೆಸ್ ದೃಢಪಡಿಸಿದೆ.