ರಾಷ್ಟ್ರಪತಿ ಪುರಸ್ಕಾರ ಮುಡಿಗೇರಿಸಿದ ಕನ್ನಡಿಗ ಪೊಲೀಸ್ ಅಧಿಕಾರಿ ವೀರೇಶ ಪ್ರಭು ಸಂಗನಕಲ್
ವೀರೇಶ ಪ್ರಭು ಸಂಗನಕಲ್
ಮುಂಬೈ: ರಾಷ್ಟ್ರಪತಿ ದ್ರೌಪದಿ ಮುರುಮು ಅವರು 2024ನೇ ಸಾಲಿನ ಗಣರಾಜ್ಯೋತ್ಸವ ಸಂದರ್ಭ ಒಟ್ಟು ಆರು ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕಗಳನ್ನು ಪ್ರದಾನಿ ಸಿದ್ದು ಆ ಪೈಕಿ ಕನ್ನಡಿಗ ಹಿರಿಯ ಪೊಲೀಸ್ ಅಧಿಕಾರಿ ಸಿಬಿಐ ಮುಂಬೈ ಡಿಐಜಿ ಶಾಖೆಯ ಮುಖ್ಯಸ್ಥ ಓರ್ವರಾಗಿದ್ದಾರೆ.
ಐಪಿಎಸ್ ಅಧಿಕಾರಿ ವೀರೇಶ ಪ್ರಭು ಇವರ ವಿಶೇಷ ಸಾಧನೀಯ ಸೇವೆಗಾಗಿ ಸೇರಿದಂತೆ 25 ಸಿಬಿಐ ಅಧಿಕಾರಿಗಳು ಮತ್ತು ಇತರ ಪೊಲೀಸ್ ಅಧಿಕಾರಿಗಳಿಗೆ ಮುರ್ಮು ಅವರು ರಾಷ್ಟ್ರಪತಿಗಳ ಪೊಲೀಸ್ ಪದಕ ಪ್ರದಾನಿಸಿದರು.
ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಸಂಗನಕಲ್ ಗ್ರಾಮದ ನಿವಾಸಿ ಚನ್ನನ ಗೌಡ್.ಎಸ್ ಮತ್ತು ಮಹಾದೇವಿ ಸಂಗನಕಲ್ ದಂಪತಿಯ ಪುತ್ರ ವೀರೇಶ ಪ್ರಭು, ಧಾರವಾಡದ ಕರ್ನಾಟಕ ಕಾಲೇಜ್ನಲ್ಲಿ ಬಿ.ಎ ಪದವೀಧರರಾಗಿದ್ದು ನಂತರ ಮೈಸೂರು ಕೆಎಸ್ಒಯು ವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿ, ಹೈದರಬಾದ್ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪೊಲೀಸ್ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವರು.
ಪೊಲೀಸ್ ಸೇವೆಯಲ್ಲಿ ನೇಮಕಾತಿ ಹೊಂದಿದ್ದು ಕೇಡರ್ 2005ರ ಬ್ಯಾಚ್ ಐಪಿಎಸ್ ಅಧಿಕಾರಿ ಆಗಿದ್ದು ಸದ್ಯ ಡಿಐಜಿ ಶ್ರೇಣಿಯಲ್ಲಿದ್ದಾರೆ. ಪ್ರಸ್ತುತ ಮಹಾರಾಷ್ಟ್ರದ ಅಪರಾಧ ವಿಭಾಗದ ಮುಂಬೈ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದಾರೆ.
ಮಹಾರಾಷ್ಟ್ರದ ಗೊಂಡಿಯಾ, ಮಾಲೆಗಾಂವ್ನಲ್ಲಿ ಸಹಾಯಕ ಪೊಲೀಸ್ ಅಧೀಕ್ಷರಾಗಿ ಸೇವೆ ಸಲ್ಲಿಸಿದ್ದು, ಅಹಮದ್ ನಗರ ದಲ್ಲಿ ಹೆಚ್ಚುವರಿ ಎಸ್ಪಿ, ಗಡ್ಚಿರೋಲಿ, ಅಮರಾವತಿ ಗ್ರಾಮಾಂತರ, ಸೊಲ್ಲಾಪುರ ಗ್ರಾಮಾಂತರದಲ್ಲಿ ಎಸ್ಪಿ ಆಗಿ ಕೆಲಸ ನಿರ್ವಹಿಸಿದ್ದಾರೆ. ಟ್ರಾಫಿಕ್ ಬ್ರಾಂಚ್, ಸೆಂಟ್ರಲ್ ರೀಜನ್, ಮುಂಬೈನಲ್ಲಿ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿ ಕೆಲಸ ಮಾಡಿದ್ದು ಪ್ರಸ್ತುತ ಕ್ರೈಮ್ ಬ್ರಾಂಚ್ ಮುಂಬೈಯಲ್ಲಿ ಹೆಚ್ಚುವರಿ ಕಮಿಷನರ್ ಆಫ್ ಪೊಲೀಸ್ ಆಗಿದ್ದಾರೆ.
ಮಹಾರಾಷ್ಟ್ರ ಸರ್ಕಾರದಿಂದ ಡಿಜಿಪಿಯ ಲಾಂಛನ, ಕಠಿಣ ಕರ್ತವ್ಯಕ್ಕಾಗಿ ವಿಶೇಷ ಸೇವಾ ಪದಕ ಮಹಾರಾಷ್ಟ್ರ, ಭಾರತ ಸರ್ಕಾರದ ಸುರಕ್ಷಾ ಸೇವಾ ಪದಕ, ಮಹಾರಾಷ್ಟ್ರ ಸರ್ಕಾರದ ಅಲ್ಪಸಂಖ್ಯಾತರ ಆಯೋಗವು ಮಹಾತ್ಮಾ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದ ಹೆಮ್ಮೆಯ ಕನ್ನಡಿಗ ಪೊಲೀಸ್ ಅಧಿಕಾರಿಯಾಗಿದ್ದಾರೆ.