ʼಪ್ರಾಣಪ್ರತಿಷ್ಠೆʼಗೆ ರಾಷ್ಟ್ರಪತಿ ದ್ರೌಪದಿ ಗೈರು
ದ್ರೌಪದಿ ಮುರ್ಮು | Photo: PTI
ಅಯೋಧ್ಯೆ: ಶ್ರೀರಾಮ ಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ದೇಶದ ಪ್ರಥಮ ಪ್ರಜೆ ದ್ರೌಪದಿ ಮುರ್ಮು ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ರಾಮಜನ್ಮಭೂಮಿ ಚಳವಳಿಯ ನೇತೃತ್ವ ವಹಿಸಿದ್ದ ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಆಡ್ವಾಣಿ, ಅಯೋಧ್ಯೆಯಲ್ಲಿ ತೀವ್ರ ಚಳಿಯಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಗೈರು ಹಾಜಲಾಗಿದ್ದಾರೆನ್ನಲಾಗಿದೆ. ಇಂಡಿಯಾ ಮೈತ್ರಿಕೂಟ ಸೇರಿಂತೆ ಪ್ರತಿಪಕ್ಷಗಳ ಹಲವಾರು ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದರೆ ಆರೆಸ್ಸೆಸ್-ಬಿಜೆಪಿ ಪ್ರಾಯೋಜಿತವೆಂದು ಆರೋಪಿಸಿ ಕಾರ್ಯಕ್ರಮದಿಂದ ದೂರ ಸರಿದಿದ್ದರು.
ರಾಮಲಲ್ಲಾ ಪ್ರಾಣಪ್ರತಿಷ್ಠೆಯ ದಿನವಾದ ಸೋಮವಾರ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಲ್ಕತಾದಲ್ಲಿ ಸರ್ವಧರ್ಮ ಸೌಹಾರ್ದ ರ್ಯಾಲಿಯನ್ನು ಆರಂಭಿಸಿದರು. ನಗರದ ಹಝ್ರಾ ಮೋರೆ ಪ್ರದೇಶದಿಂದ ಆರಂಭಗೊಂಡ ಪಾದಯಾತ್ರೆಯಲ್ಲಿ ಮಮತಾ ಜೊತೆಗೆ ವಿವಿಧ ಧರ್ಮಗಳ ಮುಖಂಡರು ಹಾಗೂ ಪಕ್ಷದ ನಾಯಕರು ಭಾಗವಹಿಸಿದ್ದರು.
Next Story