ತಿರುಮಲ ದೇವಾಲಯದ ಬಳಿ ರಾಜಕೀಯ ಹೇಳಿಕೆ, ದ್ವೇಷ ಭಾಷಣ ಮಾಡದಂತೆ ನಿಷೇಧ ವಿಧಿಸಿದ ಆಡಳಿತ ಮಂಡಳಿ
ತಿರುಮಲ ದೇವಾಲಯ | PC : PTI
ಹೊಸದಿಲ್ಲಿ: ತಿರುಮಲ ದೇವಾಲಯದ ದರ್ಶನಕ್ಕೆ ಬಂದ ಯಾರು ಕೂಡ ರಾಜಕೀಯ ಹೇಳಿಕೆ, ದ್ವೇಷದ ಭಾಷಣಗಳನ್ನು ಮಾಡುವಂತಿಲ್ಲ ಎಂದು ನಿಷೇಧ ವಿಧಿಸಿ ತಿರುಮಲ ತಿರುಪತಿ ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯನ್ನು ಹೊರಡಿಸಿದೆ.
ಸದಾ ಗೋವಿಂದ ನಾಮಸ್ಮರಣೆ ಮೊಳಗುವ ಪವಿತ್ರ ತಿರುಮಲ ದೈವಸ್ಥಾನದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವರು ಹಾಗೂ ರಾಜಕೀಯ ಮುಖಂಡರು ತಿರುಮಲ ದೇಗುಲದಲ್ಲಿ ದರ್ಶನ ಪಡೆದ ಬಳಿಕ ದೇವಸ್ಥಾನದ ಎದುರು ಮಾಧ್ಯಮಗಳ ಮುಂದೆ ರಾಜಕೀಯ ದ್ವೇಷದ ಹೇಳಿಕೆ ನೀಡಿ ತಿರುಮಲ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಆದ್ದರಿಂದ ತಿರುಮಲ ದೇವಾಲಯದ ಪಾವಿತ್ರ್ಯತೆ ಮತ್ತು ಆಧ್ಯಾತ್ಮಿಕ ಶಾಂತಿ ಕಾಪಾಡಲು ದೇವಾಲಯದ ಬಳಿ ರಾಜಕೀಯ ಮತ್ತು ದ್ವೇಷದ ಭಾಷಣಗಳನ್ನು ನಿಷೇಧಿಸಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಈ ನಿರ್ಧಾರಕ್ಕೆ ಎಲ್ಲರೂ ಸಹಕರಿಸುವಂತೆ ತಿರುಮಲ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದ್ದು, ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದೆ.