ಛತ್ತೀಸ್ ಗಡ ಮುಖ್ಯಮಂತ್ರಿಯಾಗಿ ಬುಧವಾರ ವಿಷ್ಣು ದಿಯೋ ಸಾಯಿ ಪ್ರಮಾಣವಚನ
ವಿಷ್ಣು ದಿಯೋ ಸಾಯಿ | Photo; PTI
ರಾಯಪುರ: ಛತ್ತೀಸ್ ಗಡದ ನೂತನ ಮುಖ್ಯಮಂತ್ರಿಯಾಗಿ ವಿಷ್ಣು ದಿಯೋ ಸಾಯಿ ಅವರು ಬುಧವಾರ ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ.
ಇಲ್ಲಿಯ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಾಯಿ ಮತ್ತು ಅವರ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಐತಿಹಾಸಿಕವಾಗಲಿದೆ. ಪ್ರಧಾನಿ ನರೇಂದ್ರ ಮೋದಿ,ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿ ನಾಯಕರು ಮತ್ತು ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಅರುಣ ಸಾವೊ ತಿಳಿಸಿದರು.
ಮಾಜಿ ಕೇಂದ್ರ ಸಚಿವರಾದ ಸಾಯಿ ಛತ್ತೀಸ್ ಗಡ ಬಿಜೆಪಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
Next Story