ಮನೆಗೆ ನುಗ್ಗಲು ಯತ್ನಿಸಿದ ಮೂವರು ದರೋಡೆಕೋರರನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿದ ಮಹಿಳೆ; ವಿಡಿಯೊ ವೈರಲ್
PC : indiatoday.in
ಅಮೃತಸರ: ಮನೆಗೆ ನುಗ್ಗಲು ಯತ್ನಿಸಿದ ಮೂವರು ದರೋಡೆಕೋರರನ್ನು ಮಹಿಳೆಯೊಬ್ಬರು ಧೈರ್ಯವಾಗಿ ಹಿಮ್ಮೆಟ್ಟಿಸಿದ್ದು, ಈ ಘಟನೆಯ ವಿಡಿಯೊ ವೈರಲ್ ಆಗಿದೆ.
ಮಹಿಳೆಯು ಟೆರೇಸ್ ಮೇಲೆ ಬಟ್ಟೆಯನ್ನು ಒಣಗಿ ಹಾಕುತ್ತಿರುವಾಗ, ಮುಖಗವಸು ತೊಟ್ಟಿರುವ ಮೂವರು ಯುವಕರು ಹೊರಗಿನಿಂದ ಮನೆಯೊಳಗೆ ನುಗ್ಗಲು ಯತ್ನಿಸುತ್ತಿರುವುದನ್ನು ಗಮನಿಸಿದ್ದಾರೆ. ದಿಢೀರನೆ ಓರ್ವ ನುಸುಳುಕೋರ ಗೋಡೆಯ ಮೇಲಿಂದ ಕೆಳಗೆ ಜಿಗಿದಿದ್ದು, ಮುಖ್ಯ ದ್ವಾರದ ಮೂಲಕ ಮನೆಯೊಳಗೆ ಪ್ರವೇಶಿಸಲು ಯತ್ನಿಸಿದ್ದಾನೆ. ಆಗ ಒಂದು ಕ್ಷಣವೂ ತಡ ಮಾಡದ ಮಹಿಳೆಯು ನೆಲಮಹಡಿಗೆ ಓಡಿ ಬಂದಿದ್ದು, ನುಸುಳುಕೋರನು ಬಾಗಿಲನ್ನು ನೂಕುವುದರೊಳಗೆ, ಬಾಗಿಲಿನ ಚಿಲಕ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
अमृतसर में एक महिला ने चोरों को बहादुरी से सबक सिखाया। चोरों की कोशिशों के बावजूद, महिला की दिलेरी उनके लिए भारी पड़ी...#amritsar #thief pic.twitter.com/l75wYxBM6O
— Ajeet Yadav (@ajeetkumarAT) October 1, 2024
ಮಹಿಳೆಯ ಧೈರ್ಯ ಮತ್ತು ಕ್ಷಿಪ್ರ ಕಾರ್ಯಾಚರಣೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅಪಾಯದ ಸಂದರ್ಭದಲ್ಲಿ ಆಕೆ ತೋರಿರುವ ಧೈರ್ಯವಂತಿಕೆಗೆ ಹಲವಾರು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದರೋಡೆ ಪ್ರಯತ್ನದ ಕುರಿತು ತನಿಖೆ ಪ್ರಾರಂಭಿಸಿದ್ದಾರೆ ಎಂದು ಹೇಳಲಾಗಿದೆ.