×
Ad

ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಆನ್‌ಲೈನ್ ವಂಚನೆ: ಪ್ರಕರಣ ದಾಖಲು

Update: 2025-10-07 19:55 IST

ಮಂಗಳೂರು, ಅ.7: ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಟಾಸ್ಕ್ ಪೂರ್ಣಗೊಳಿಸುವ ಕೆಲಸ ನೀಡಿ ಸುಮಾರು 16.06 ಲಕ್ಷ ರೂ ವಂಚಿಸಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾನು ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ವರ್ಕ್ ಫ್ರಂ ಹೋಂ ಜಾಹೀರಾತು ನೋಡಿದೆ. ಬಳಿಕ ಆ ಲಿಂಕ್‌ಗೆ ಕ್ಲಿಕ್ ಮಾಡಿದೆ. ಆವಾಗ ವಾಟ್ಸ್ ಆ್ಯಪ್‌ನಿಂದ ಎಚ್‌ಆರ್ ಅಸಿಸ್ಟೆಂಟ್ ಎನ್ನುವ ಹೆಸರಿನಲ್ಲಿ ಮೆಸೇಜ್‌ನಲ್ಲಿ ಪರಿಚಯಿಸಿಕೊಂಡ ವ್ಯಕ್ತಿ ಗೂಗಲ್ ಮ್ಯಾಪ್‌ನಲ್ಲಿ ರೆಸ್ಟೋರೆಂಟ್ ಪರೀಶೀಲಿಸಿ 5 ಸ್ಟಾರ್ ನೀಡುವ ಕೆಲಸವನ್ನು ಕೊಟ್ಟಿದ್ದ. ನಂತರ ಟೆಲಿಗ್ರಾಮ್‌ಗೆ ಸೇರ್ಪಡೆಗೊಂಡಾಗ 180 ರೂ. ಪಡೆದುಕೊಂಡಿದ್ದ. ಹಾಗೇ 20 ಟಾಸ್ಕ್ ಪೂರ್ಣಗೊಳಿಸಿ 200 ರೂ. ಪಡೆದುಕೊಂಡಿದೆ. ವಿಐಪಿ ಗ್ರೂಪ್‌ಗೆ ಸೇರ್ಪಡೆಗೊಂಡು ಅಲ್ಲಿ ಷೇರುಗಳಿಂದ ಕಮಿಷನ್ ಪಡೆಯುವ ಯೋಜನೆಗೆ 1,000 ರೂ. ನೀಡಿ ಹೆಸರು ನೋಂದಾಯಿಸಿಕೊಂಡೆ. ಬಳಿಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ತಿಳಿಸಿದ ಮೇರೆಗೆ ತಾನು ವಿವಿಧ ಖಾತೆಗಳಿಗೆ ಹಂತ ಹಂತವಾಗಿ 16,06,00 ರೂ.ವನ್ನು ವರ್ಗಾವಣೆ ಮಾಡಿದೆ. ಅದನ್ನು ವಾಪಸ್ ಪಡೆಯಲು ಯತ್ನಿಸಿದಾಗ ಸಾಧ್ಯವಾಗಿಲ್ಲ ಎಂದು ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News