ನೀಕೋ ವತಿಯಿಂದ ಚಾಕೋಲೇಟ್ ಸ್ಟ್ರೀಟ್ 2024: ಸ್ಥಳೀಯ ಉದ್ದಿಮೆ ಬೆಂಬಲಕ್ಕೆ ವಿದ್ಯಾರ್ಥಿಗಳ ಪ್ರಯತ್ನ

Update: 2024-05-09 15:49 GMT

ಮಂಗಳೂರು: ನಗರದ ಸ್ಥಳೀಯ ಬೇಕರಿ ಉದ್ಯಮಿಗಳು ಹಾಗೂ ಇತರೆ ಸಣ್ಣ ಉದ್ಯಮಿಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸುವ ಉದ್ದೇಶಕ್ಕಾಗಿ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ನಿಕೋ) ವತಿಯಿಂದ ಮೇ 11 ಮತ್ತು 12ರಂದು ನಗರದ ಪಾಂಡೇಶ್ವರದ ಫಿಝಾ ಬೈ ನೆಕ್ಸಸ್‌ನ ಮೂರನೇ ಮಹಡಿಯಲ್ಲಿ ಐದನೇ ಆವೃತ್ತಿಯ ಚಾಕೋಲೇಟ್ ಸ್ಟ್ರೀಟ್ 2024 ಕಾರ್ಯಕ್ರಮ ಆಯೋಜಿಸಲಾಗಿದೆ.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿಕೋ ಉಪನ್ಯಾಸಕರು ಮತ್ತು ಶೈಕ್ಷಣಿಕ ಆಯೋಜಕರಾದ ಡಾ.ಅನೀಶ ನಿಶಾಂತ್ ಅವರು ಮೇ 11ರಂದು ಮಧ್ಯಾಹ್ನ 12ಕ್ಕೆ ಕಾರ್ಯಕ್ರಮದ ಉದ್ಘಾಟನೆ ನೆರವೇ ರಲಿದೆ. ಮುಖ್ಯ ಅತಿಥಿಯಾಗಿ ದಿ ಓಷನ್ ಪರ್ಲ್ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್‌ನ ಗುಂಪು ಕಲಿಕೆ ಮತ್ತು ಅಭಿವೃದ್ಧಿ ವ್ಯವಸ್ಥಾಪಕ ದುರೈ ಅರುಣ್ ಪ್ರಸಾಂತ್ ಸೆಲ್ವಂ ಭಾಗವಹಿಸಲಿದ್ದಾರೆ.

ಗೌರವ ಅತಿಥಿಯಾಗಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಬ್ರ್ಯಾಂಡಿಂಗ್ ವಿಭಾಗದ ನಿರ್ದೇಶಕ ರೋಷನ್ ಕೋಲಾರ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಶನಿವಾರ ಬೆಳಿಗ್ಗೆ 10ರಿಂದ ರವಿವಾರ ಸಂಜೆ 7:30ರವರೆಗೆ ನಡೆಯಲಿದೆ.

ಈ ವರ್ಷದ ಚಾಕೋಲೇಟ್ ಸ್ಟ್ರೀಟ್ 2024 ಕಾರ್ಯಕ್ರಮದಲ್ಲಿ ಸುಮಾರು 20ಕ್ಕೂ ಹೆಚ್ಚು ಗೃಹ ಬೇಕರ್‌ಗಳು ಹಾಗೂ 5 ನವೀನ ನವೋದ್ಯಮಿಗಳು ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮದ ಮೂಲಕ ಗೃಹ ಬೇಕರ್‌ಗಳು ಹಾಗೂ ನವೋದ್ಯಮಿ ಗಳನ್ನು ಉತ್ತೇಜಿಸುವುದು ಮುಖ್ಯ ಆಶಯವಾಗಿದೆ ಎಂದು ಅವರು ಹೇಳಿದರು.

ಚಾಕೋಲೇಟ್ ಸ್ಟ್ರೀಟ್ 2024 ಓಪನ್ ಮೈಕ್ ಕಾರ್ಯಕ್ರಮದ ಮೂಲಕ ಸ್ಥಳೀಯ ಪ್ರತಿಭೆಗಳು ತಮ್ಮ ಪ್ರತಿಭಾ ಪ್ರದರ್ಶನ ಮಾಡಬಹುದು. ಈಗಾಗಲೇ ನಡೆದಿರುವ ಆವೃತ್ತಿಗಳಿಂದ ಸುಮಾರು 40ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಿ ದ್ದಾರೆ. ಈ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬೇಕ್ ಆಫ್ ಎಂಬ ಕೇಕ್ ತಯಾರಿ ಹಾಗೂ ಸಿಂಗಾರ ಸವಾಲು ಕಾರ್ಯ ಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಿಗಳಿಗೆ ಚಾಕೋಲೇಟ್ ಸ್ಟ್ರೀಟ್ 2024 ಕಾರ್ಯಕ್ರಮದಲ್ಲಿ ಒಂದು ಉಚಿತ ಸ್ಟಾಲ್ ನೀಡಲಾಗಿದೆ ಡಾ.ಅನೀಶ ನಿಶಾಂತ್ ತಿಳಿಸಿದರು.

ಚಾಕೋಲೇಟ್ ಸ್ಟ್ರೀಟ್ 2024 ಕಾರ್ಯಕ್ರಮವು ಬಿಎ ಮಾಧ್ಯಮ ಮತ್ತು ಸಂವಹನ 3ನೇ ವರ್ಷದ ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಣೆ ವಿಷಯದ ಭಾಗವಾಗಿ ನಡೆಸುವ ಶೈಕ್ಷಣಿಕ ಕಾರ್ಯಕ್ರಮವಾಗಿದೆ. ಅತ್ಯುತ್ತಮ ಯೋಜನೆ, ಸೃಜನಾತ್ಮಕ ಪ್ರಚಾರದ ಮೂಲಕ ನೇರವಾಗಿ ಪ್ರಾಯೋಗಿಕ ಅನುಭವ ಹಾಗೂ ನೈಪುಣ್ಯತೆಯನ್ನು ಪಡೆಯುತ್ತಾರೆ. ಸಮುದಾಯ ಸಹಭಾಗಿತ್ವದ ಮೂಲಕ ಕಲಿಕೆಯನ್ನು ಉತ್ತೇಜಿಸುವ ಮಹತ್ತರ ಉದ್ದೇಶವನ್ನು ಚಾಕೋಲೇಟ್ ಸ್ಟ್ರೀಟ್ 2024 ಹೊಂದಿದೆ.

ನಿಟ್ಟೆ ಇನ್‌ಸ್ಟಿಟ್ಯೂಟ್ ಮಾನ್ಯತೆ ಪಡೆದ ಸಂಸ್ಥೆ: ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಗೊಡೊಕ್ಸ್ (ಉಔಆಔಘಿ) ಫೋಟೋ ಎಕ್ವಿಪ್ಮೆಂಟ್ ಸಂಸ್ಥೆಯಿಂದ ಮಾನ್ಯತೆ ಪಡೆದ ಏಕಮಾತ್ರ ಸಂಸ್ಥೆಯಾಗಿದೆ. 2012ರಲ್ಲಿ ಸ್ಥಾಪಿತವಾದ ಈ ವಿದ್ಯಾಸಂಸ್ಥೆಯು ಅದ್ಭುತವಾದ ಸಕಲ ಸೌಲಭ್ಯಗಳು ಹಾಗೂ ಆಕರ್ಷಕ ಪಠ್ಯಕ್ರಮವನ್ನು ಒಳಗೊಂಡಿದೆ ಎಂದು ಡಾ.ಅನೀಶ ನಿಶಾಂತ್ ನುಡಿದರು.

ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಸಂಯೋಜಕರಾದ ಬ್ರಿಯಾನ್ ಬಾನ್ಸ್, ಶ್ರೀನಿವಾಸ್ ಟಿವಿ, ಅಮೆಯಾ ದಾಸ್, ಹನುಶಿಯಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News