ಮಂಗಳೂರು: ಮೇ 4ರಂದು ಹಜ್ ತರಬೇತಿ ಶಿಬಿರ

Update: 2024-04-28 14:15 GMT

ಮಂಗಳೂರು, ಎ.28: ಹಜ್ ತರಬೇತಿ ಶಿಬಿರ ಮೇ 4ರಂದು ಬಂದರಿನ ಯತೀಂ ಖಾನದ ಸಭಾಂಗಣದಲ್ಲಿ ನಡೆಯಲಿದೆ.

ಎ.30ರಂದು ನಡೆಯಬೇಕಿದ್ದ ಹಜ್ ತರಬೇತಿ ಶಿಬಿರವನ್ನು ಮೇ 4ಕ್ಕೆ ಮುಂದೂಡಲಾಗಿದೆ.

ದ.ಕ ಮತ್ತು ಉಡುಪಿ ಜಿಲ್ಲೆಯಿಂದ 2024ನೇ ಸಾಲಿನ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಎ.30ರಂದು ಬೆಳಗ್ಗೆ 9:30 ರಿಂದ ಸಂಜೆ 5 ಗಂಟೆಯ ವರೆಗೆ ಜಪ್ಪಿನ ಮುಗೇರು ಯೆನೆಪೋಯ ಶಾಲಾ ವಠಾರದಲ್ಲಿ ಲಸಿಕೆಯನ್ನು ನೀಡಲಾಗುವುದು.

ಹಜ್ ಯಾತ್ರಾರ್ಥಿಗಳು ಕಡ್ಡಾಯವಾಗಿ ಲಸಿಕೆಯನ್ನು ಪಡೆಯಬೇಕಾಗಿದೆ. ಹಜ್‌ಗೆ ಯಾತ್ರಾರ್ಥಿಗಳು ಲಸಿಕೆಗೆ ಬರುವಾಗ ಹಜ್ ಕಮಿಟಿಗೆ ಸಲ್ಲಿಸಿದ ಮೆಡಿಕಲ್ ಸರ್ಟಿಫಿಕೇಟ್‌ನ ಪ್ರತಿಯನ್ನು ತರುವುದು ಕಡ್ಡಾಯವಾಗಿದೆ ಎಂದು ದ.ಕ ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News