ದ.ಕ.ಜಿಲ್ಲೆಯ 5,878 ಹಿರಿಯ ಮತದಾರರಿಂದ ಮತದಾನ

Update: 2024-04-17 17:50 GMT

ಮಂಗಳೂರು: ಈ ಬಾರಿ ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟವರಿಗೆ ಮತ್ತು ಶೇ.40ಕ್ಕೂ ಹೆಚ್ಚು ಅಂಗವಿಕಲತೆ ಹೊಂದಿರುವ ದಿವ್ಯಾಂಗರಿಗೆ ಮನೆಯಿಂದಲೇ ಮತ ಹಾಕಲು ನೀಡಿದ ಅವಕಾಶದಂತೆ ದ.ಕ‌.ಜಿಲ್ಲೆಯಲ್ಲಿ ಕಳೆದ ಮೂರು ದಿನದಿಂದ 5878 ಹಿರಿಯ ಮತದಾರರಿಂದ ಮತ ಚಲಾವಣೆಯಾಗಿದೆ‌.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಧಿಕಾರಿಗಳು, ಸಿಬ್ಬಂದಿ ಸೋಮವಾರದಿಂದ ಬುಧವಾರದವೆರೆಗೆ ಮನೆಮನೆಗೆ ತೆರಳಿ ಅರ್ಹರ ಮತದಾನಕ್ಕೆ ವ್ಯವಸ್ಥೆ ಮಾಡಿದ್ದರು.

ಜಿಲ್ಲೆಯಲ್ಲಿ 85 ಕ್ಕೂ ಹೆಚ್ಚು ವಯಸ್ಸಾದ 6,053 ಮತದಾರರು ಮನೆಯಿಂದಲೇ ಮತದಾನಕ್ಕೆ ಹೆಸರು ನೋಂದಾಯಿಸಿ ಕೊಂಡಿದ್ದರು. ಈವರೆಗೆ ಬಂದ ಮಾಹಿತಿಯಂತೆ 5,878 ಮತದಾರರು ಹಕ್ಕು ಚಲಾಯಿಸಿದ್ದಾರೆ. ಅದಲ್ಲದೆ ಮನೆಯಿಂದಲೇ ಮತದಾನಕ್ಕೆ ಹೆಸರು ನೋಂದಾಯಿಸಿದ್ದ 1,957 ವಿಕಲಚೇತನ ಮತದಾರರ ಪೈಕಿ ಈವರೆಗೆ 1,929 ಮಂದಿ ಮತ ಚಲಾಯಿಸಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News