ಮೇ 9ರಿಂದ ಅರಸ್ತಾನ ದರ್ಗಾ ಉರೂಸ್ ಕಾರ್ಯಕ್ರಮ

Update: 2024-05-05 15:19 GMT

ಮಂಗಳೂರು : ಪಾವೂರು ಗ್ರಾಮದ ಮಲಾರ್ ಅರಸ್ತಾನದ ಅರ್ರಿಫಾಯಿಯಾ ನುಸ್ರತುಲ್ ಮುಸ್ಲಿಮೀನ್ ಅಸೋಸಿ ಯೇಶನ್‌ನ 48ನೆ ವಾರ್ಷಿಕೋತ್ಸವದ ಅಂಗವಾಗಿ ಧಾರ್ಮಿಕ ಉಪನ್ಯಾಸ ಮತ್ತು ಅರಸ್ತಾನ ದರ್ಗಾ ಉರೂಸ್ ಕಾರ್ಯಕ್ರಮವು ಮೇ 9ರಿಂದ 12ರವರೆಗೆ ನಡೆಯಲಿದೆ.

ಮೇ 9ರಂದು ಮಗ್ರಿಬ್ ನಮಾಝ್ ಬಳಿಕ ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಸಭಾ ಕಾರ್ಯ ಕ್ರಮ ಉದ್ಘಾಟಿಸುವರು. ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಅಧ್ಯಕ್ಷ ಸೈಯ್ಯದುಲ್ ಉಲಮಾ ಅಸ್ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಳ್ ದುಆ ಆಶೀರ್ವಚನ ನೀಡುವರು. ಅತಿಥಿಗಳಾಗಿ ಮಸೀದಿಯ ಮಾಜಿ ಅಧ್ಯಕ್ಷ ರಾದ ಮುಹಮ್ಮದ್ ಮೋನು, ಹಂಝ ಮಲಾರ್, ಅಲ್ತಾಫ್ ಅಹ್ಮದ್ ಭಾಗವಹಿಸಲಿದ್ದಾರೆ.

ಮೇ 9ರಂದು ಮುಹಮ್ಮದ್ ಶಫೀಕ್ ಅಲ್ ಫಾಳಿಲ್ ಕೌಸರಿ ಅನ್ನುಜೂಮಿ, ಮೇ 10ರಂದು ಸ್ವದಕತುಲ್ಲಾ ಫೈಝಿ, ಮೇ 11ರಂದು ಅಬ್ದುಸ್ಸಲಾಂ ಮದನಿ ಉರುವಾಲು ಪದವು, ಮೇ 12ರಂದು ಎನ್.ಎಚ್. ಆದಂ ಫೈಝಿ ಪ್ರವಚನ ನೀಡಲಿ ದ್ದಾರೆ. ಮೇ 11ರಂದು ಶೈಖುನಾ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ನೇತೃತ್ವದಲ್ಲಿ ಮಜ್ಲಿಸುನ್ನೂರ್ ನಡೆಯಲಿದೆ.

ಮೇ 12ರಂದು ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಸಯ್ಯಿದ್ ಶರಫುದ್ದೀನ್ ತಂಳ್ ಫರೀದ್‌ನಗರ ದುಆ ಆಶೀರ್ವಚನ ನೀಡುವರು. ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್, ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಉದ್ಯಮಿಗಳಾದ ಲತೀಫ್ ಗುರುಪುರ, ಬಿಎಂ ಫಾರೂಕ್, ಪಾವೂರು ಗ್ರಾಪಂ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅಲ್‌ಮುಬಾರಕ್ ಜುಮಾ ಮಸೀದಿಯ ಅಧ್ಯಕ್ಷ ಎಂಪಿ ಅಬ್ದುಲ್ ರಹ್ಮಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News