ಜೂ.1: ಜಲಾಲ್ ಮಸ್ತಾನ್ ಆಂಡ್ ನೇರ್ಚೆ

Update: 2024-05-09 13:27 GMT

ಮಂಗಳೂರು, ಮೇ 9: ಅಶೈಖ್ ಅಸ್ಸೈಯ್ಯದ್ ಮುಹಮ್ಮದ್ ಮೌಲಾ ಜಲಾಲ್ ಮಸ್ತಾನ್ ಅಲ್ ಬುಖಾರಿ ಅವರ 98ನೇ ಆಂಡ್ ನೇರ್ಚೆಯು ಬಂದರ್‌ನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಜೂ.1ರಂದು ಬೆಳಗ್ಗೆ 8:30ಕ್ಕೆ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್‌ರ ನೇತೃತ್ವದಲ್ಲಿ ನಡೆಯಲಿದೆ.

ಆಂಡ್ ನೇರ್ಚೆಯ ಪ್ರಯುಕ್ತ ಮೇ 26ರಿಂದ 30ರವರೆಗೆ ಇಶಾ ನಮಾಝಿನ ಬಳಿಕ ಧಾರ್ಮಿಕ ಪ್ರವಚನ ಹಾಗೂ ಮೇ 31 ರಂದು ಮಗ್ರಿಬ್ ನಮಾಝಿನ ಬಳಿಕ ಅಧ್ಯಕ್ಷ ಹಾಜಿ ವೈ. ಅಬ್ದುಲ್ಲಾ ಕುಂಞಿಯ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ. ಬಳಿಕ ದುಆ ಮಜ್ಲಿಸ್ ನಡೆಯಲಿದೆ ಎಂದು ಮಸ್ಜಿದ್ ಝೀನತ್ ಭಕ್ಷ್ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News