ಜೂ.24: ಸೌಹಾರ್ದ ಸಂಗಮ ಕಾರ್ಯಕ್ರಮ
Update: 2025-06-23 20:15 IST
ಮಂಗಳೂರು: ಎಂಪಿ ಎಂಎಲ್‌ಎ ನ್ಯೂಸ್ ವತಿಯಿಂದ 13ನೇ ಸೌಹಾರ್ದ ಸಂಗಮ ಕಾರ್ಯಕ್ರಮ ಜೂ.24ರಂದು ಸಂಜೆ 4ರಿಂದ ರಾತ್ರಿ 9ರವರೆಗೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ ಎಂದು ಎಂಪಿ ಎಂಎಲ್‌ಎ ನ್ಯೂಸ್ ಸಂಪಾದಕ ಅಶೋಕ್ ಶೆಟ್ಟಿ ಬಿ.ಎನ್ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾಜದ ಸಾಧಕ ಶ್ರೇಷ್ಠ ರಿಗೆ ಸಮ್ಮಾನ ನಡೆಯಲಿದೆ. ಜನಪ್ರತಿನಿಧಿಗಳು, ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಗಾಯಕ ರವೀಂದ್ರ ಪ್ರಭು ಬಳಗದಿಂದ ‘ರಾಗ ರಂಗ್’ ಸಂಗೀತ ರಸಮಂಜರಿ, ದಿನೇಶ್ ಆತ್ತಾವರ ನಿರ್ದೇಶನದಲ್ಲಿ ‘ಯುವ ಜಾಗೃತಿ’ ಹಾಡು ನಾಟಕ ಸಮ್ಮಿಲನದ ಜಾಗೃತಿ ಕಾರ್ಯಕ್ರಮ ರಂಗಚಲನ ಮಂಗಳೂರು ವತಿಯಿಂದ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ ಎಂದವರು ಮಾಹಿತಿ ನೀಡಿದರು.