ಆ.15: ಎಸ್ ವೈ ಎಸ್ ವತಿಯಿಂದ 'ಸ್ವತಂತ್ರ ಸಂಜೆ', 'ಯೂನಿ-ಟೀ' ಕಾರ್ಯಕ್ರಮ
Update: 2025-08-14 18:48 IST
ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಆ.15ರಂದು ಸಂಜೆ 4 ಗಂಟೆಗೆ ಎಲ್ಲ ಶಾಖೆಗಳಲ್ಲಿ 'ಸ್ವತಂತ್ರ ಸಂಜೆ' ಕಾರ್ಯಕ್ರಮ ನಡೆಯಲಿದೆ.
ಬಹು ಧರ್ಮೀಯ ಸಹೋದರರು ಜೊತೆಗೂಡಿ ಕೂರುವುದು, 'ಯೂನಿ-ಟೀ' ಚಹಾ ಹೀರುವುದು, ನಿನ್ನೆಯ ನೆನಪುಗಳು ಮತ್ತು ನಾಳೆಯ ಕನಸುಗಳ ಬಗ್ಗೆ ಮಾತುಕತೆ ನಡೆಸುವುದು ಕಾರ್ಯಕ್ರಮದ ಅಂಶವಾಗಿದ್ದು, ರಾಷ್ಟ್ರಗೀತೆಯೊಂದಿಗೆ ಸಮಾರೋಪಗೊಳ್ಳುವುದು. 'ಹೃದಯ ಹೃದಯಗಳನ್ನು ಬೆಸೆಯೋಣ' ಎಂಬ ಧ್ಯೇಯವಾಕ್ಯದೊಂದಿಗೆ ಎಸ್ ವೈ ಎಸ್ ನಡೆಸುತ್ತಿರುವ ಕೋಮು ಸೌಹಾರ್ದ ಅಭಿಯಾನದ ಭಾಗವಾಗಿ ಸಂಘಟನೆಯ ಎಲ್ಲ ಶಾಖೆಗಳಲ್ಲಿ ಪ್ರಸ್ತುತ ಕಾರ್ಯಕ್ರಮ ನಡೆಯಲಿದೆ ಎಂದು ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಕೆ ಎಂ ಸಿದ್ದೀಖ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.