×
Ad

ಉಚ್ಚಿಲ ಬೀಚ್ ರಸ್ತೆ ಅಗಲೀಕರಣಕ್ಕೆ ಶಿಲಾನ್ಯಾಸ

Update: 2025-12-09 15:40 IST

ಉಳ್ಳಾಲ : ಭಗವತಿ ಶಾಲೆಯಿಂದ ಉಚ್ಚಿಲ ಬೀಚ್ ರಸ್ತೆ ಅಗಲೀಕರಣದ ಶಿಲಾನ್ಯಾಸ ಕಾರ್ಯಕ್ರಮ ಮಂಗಳವಾರ ನಡೆಯಿತು.

ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು, ಭಗವತಿ ಶಾಲೆಯಿಂದ ಉಚ್ಚಿಲ ಬೀಚ್ ರಸ್ತೆ ಅಗಲೀಕರಣಕ್ಕೆ ಸ್ಪೀಕರ್ ಯುಟಿ ಖಾದರ್ ಅವರು 80 ಲಕ್ಷ ರೂ. ಅನುದಾನ ಇಟ್ಟಿದ್ದು, 40 ಲಕ್ಷ ರೂ. ಬಿಡುಗಡೆ ಗೊಳಿಸಿದ್ದಾರೆ. ಈ ರಸ್ತೆ ಅಗಲೀಕರಣಕ್ಕೆ ಸ್ಥಳೀಯರು, ಗುತ್ತಿಗೆದಾರರ ಜೊತೆ ಸಹಕಾರ ನೀಡಬೇಕು ಎಂದು ಹೇಳಿದರು.

ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್, ಸದಸ್ಯ ಯು.ಸಲಾಮ್ ಉಚ್ಚಿಲ ಮಾತನಾಡಿದರು.

ಪುರಸಭೆ ಅಧ್ಯಕ್ಷ ಕಮಲ, ಸಲಾಮ್ ಉಚ್ಚಿಲ, ಮನ್ಸೂರ್ ಮಂಚಿಲ, ಸೈಫುಲ್ಲಾ ಸೋಮೇಶ್ವರ, ಇಸ್ಮಾಯಿಲ್ ಹಾಜಿ ಕೊಪ್ಪಳ, ಮಜೀದ್ ಹಾಜಿ ಉಚ್ಚಿಲ, ರಾಘವ ಆರ್.ಉಚ್ಚಿಲ, ದೀಪಕ್ ಪಿಲಾರ್, ಪುರಸಭೆ ನಾಮ ನಿರ್ದೇಶಿತ ಸದಸ್ಯ ದಿಲೀಪ್ ರೇಗೋ, ಪುರುಷೋತ್ತಮ ಗಟ್ಟಿ, ಇಸ್ಮಾಯಿಲ್, ಕಿಶೋರ್ ಉಚ್ಚಿಲ, ಹರೀಶ್ ಉಚ್ಚಿಲ, ಕರೀಮ್ ನಾಗದೋಟ, ಚಂದ್ರ ಉಚ್ಚಿಲ, ಯು.ಎ. ಇಬ್ರಾಹೀಮ್, ನಾಸೀರ್ ಖಾನ್, ಇಸ್ಮಾಯೀಲ್ ತಲಪಾಡಿ, ರಫೀಕ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News