ಮಾಧವ ಬಂಗೇರರಿಗೆ ಕದ್ರಿ ಕಂಬಳ ಗುತ್ತು ಪ್ರಶಸ್ತಿ ಪ್ರದಾನ
ಮಂಗಳೂರು: ಪಾವಂಜೆ ಮೇಳದ ಕಲಾವಿದ, ಪ್ರಬಂಧಕ ಯಕ್ಷ ರಾಮ ಬಿರುದಾಂಕಿತ ಮಾಧವ ಬಂಗೇರ ಕೊಳತ್ತಮಜಲು ಅವರಿಗೆ ಕದ್ರಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಕದ್ರಿ ಯಕ್ಷ ಬಳಗದ ಪಾವಂಜೆ ಮೇಳದ ಸೇವೆ ಆಟದ ವೇದಿಕೆಯಲ್ಲಿ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹಿರಿಯ ವೈದ್ಯ ಡಾ. ಜಯಶಂಕರ್ ಮಾರ್ಲ, ಉದ್ಯಮಿ ಜಿತೇಂದ್ರ ಕೊಟ್ಟಾರಿ, ದಿವಾಕರ ಶೆಟ್ಟಿ, ಯಕ್ಷಗಾನ ಅಕಾಡಮಿ ಸದಸ್ಯ ವಿಜಯ ಕುಮಾರ್ ಮೊಯ್ಲೊಟ್ಟು, ಸಂಜಯ್ ಕುಮಾರ್ ಗೋಣಿಬೀಡು ಭಾಗವಹಿಸಿದ್ದರು.
ಕದ್ರಿ ಯಕ್ಷ ಬಳಗದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿರ ಸ್ಮರಣೆ ಮಾಡಿದರು. ಅರ್ಚಕ ಕದ್ರಿ ರವಿ ಅಡಿಗ ಮಾತನಾಡಿದರು. ಪ್ರಸಂಗ ಕರ್ತ ಕದ್ರಿ ನವನೀತ ಶೆಟ್ಟಿ ರಚಿಸಿದ ಛಾಯಾ ನಂದನ ಕೃತಿಯ ಬಗ್ಗೆ ಮಾತನಾಡಿದ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಕೊಳತ್ತಮಜಲು ಅವರನ್ನು ಅಭಿನಂದಿಸಿದರು.
ಪ್ರದೀಪ್ ಆಳ್ವ ಕದ್ರಿ ಸನ್ಮಾನಿತರನ್ನು ಅಭಿನಂದಿಸಿದರು. ಬಳಗದ ತಾರಾನಾಥ್ ಶೆಟ್ಟಿ ಬೋಳಾರ, ಲೀಲಾಕ್ಷ ಬಿ. ಕರ್ಕೇರ, ಶಿವಪ್ರಸಾದ್ ಎನ್. ಪ್ರಭು, ಗೋಕುಲ್ ಕದ್ರಿ, ಕೃಷ್ಣ ಶೆಟ್ಟಿ ತಾರೆಮಾರ್, ಜಯಶೀಲ ಅಡ್ಯಂತಾಯ, ಹರೀಶ್ ಕುಮಾರ್ ಚಿತ್ರಾಪುರ, ಎಲ್ಲೂರು ರಾಮಚಂದ್ರ ಭಟ್, ಮಹೇಶ್ ಪಾಟೀಲ್ ಉಪಸ್ಥಿತರಿದ್ದರು.
ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ರಾವ್ ಪೇಜಾವರ ವಂದಿಸಿದರು.