Mangaluru | ಉರ್ವ ಪೊಂಪೈ ಮಾತೆಯ ವಾರ್ಷಿಕ ಮಹೋತ್ಸವ
Update: 2025-12-07 19:29 IST
ಮಂಗಳೂರು, ಡಿ.7: ನಗರದ ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ರವಿವಾರ ನಡೆಯಿತು.
ವಾರ್ಷಿಕ ಮಹೋತ್ಸವದ ಕೃತಜ್ಞತಾ ಪೂಜೆಯ ನೇತೃತ್ವ ವಹಿಸಿ ಆಶೀವರ್ಚನ ನೀಡಿದ ಮಂಗಳೂರು ಕೆಥೋಲಿಕ್ ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಡಾ.ಪೀಟರ್ ಪಾವ್ಲಾ ಸಲ್ಡಾನಾ ಮಾತನಾಡಿ, ದೇವರ ಮೇಲಿನ ವಿಶ್ವಾಸವು ಯಾರನ್ನು ನಿರಾಶೆ ಮಾಡುವುದಿಲ್ಲ ಎನ್ನುವುದಕ್ಕೆ ಮೇರಿ ಮಾತೆ ಸಾಕ್ಷಿಯಾಗಿದ್ದಾರೆ. ಮೇರಿ ಮಾತೆಯ ಬದುಕು ಯೇಸುವಿನ ಹಾದಿಯಲ್ಲಿ ಸಾಗಿಕೊಂಡು ಬಂತು. ಅವರು ದೇವರ ಕೃಪೆಗೆ ಪಾತ್ರವಾದರು ಎಂದರು.
ಈ ಸಂದರ್ಭ ಪುಣ್ಯ ಕ್ಷೇತ್ರದ ನಿರ್ದೇಶಕ ಫಾ.ಬೆಂಜಮಿನ್ ಪಿಂಟೋ, ಸಹಾಯಕ ಧರ್ಮಗುರುಗಳಾದ ಫಾ.ಲ್ಯಾನ್ಸನ್ ಪಿಂಟೋ, ಫಾ.ಮೈಕಲ್ ಲೋಬೋ ಸಹಿತ ಮಂಗಳೂರು ಧರ್ಮಪ್ರಾಂತದ 40ಕ್ಕೂ ಅಧಿಕ ಧರ್ಮಗುರುಗಳು ಪೂಜೆಯಲ್ಲಿ ಭಾಗವಹಿಸಿದರು.
ಕೃತಜ್ಞತಾ ಪೂಜೆಯ ಬಳಿಕ ಪರಮ ಪ್ರಸಾದದ ಆರಾಧನೆ ನಡೆಯಿತು.