ಮಂಗಳೂರು | ಮಾದಕ ವಸ್ತು ಸೇವನೆ ಆರೋಪ : ಆರೋಪಿಯ ಬಂಧನ
Update: 2025-12-09 19:54 IST
ಮಂಗಳೂರು, ಡಿ.9: ಕುಡುಪು ಗ್ರಾಮದ ಪಂಜಿರೇಲು ರಸ್ತೆ ಬಳಿ ಮಾದಕ ವಸ್ತುವನ್ನು ಸೇವನೆ ಮಾಡಿದಂತೆ ಕಂಡು ಬಂದ ಕೇರಳದ ಕೊಟ್ಟಾಯಂನ ಪುಳಿಯನ್ನೂರು ನಿವಾಸಿ ಸ್ಟೀವ್ ಸ್ಟೀಫನ್ (24) ಎಂಬಾತನನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು, ಆರೋಪಿಯ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.