Mangaluru | ಬಗಂಬಿಲ ಅಂಗನವಾಡಿಯಲ್ಲಿ ಹಿರಿಯ ನಾಗರಿಕರ ದಿನಾಚರಣೆ
ಮಂಗಳೂರು, ಡಿ. 7: ರೋಶನಿ ನಿಲಯ ಸೋಶಿಯಲ್ ವರ್ಕ್ ಕಾಲೇಜಿನ ಬಿಎಸ್ಡಬ್ಲ್ಯು ವಿಭಾಗದ ಸಹಯೋಗ ವೇದಿಕೆ ಹಾಗೂ ಐಕ್ಯೂಎಸಿ ಘಟಕ, ರೋಟರಿ ಕ್ಲಬ್ ಮಂಗಳೂರು ಸಹಯೋಗದಲ್ಲಿ ಬಗಂಬಿಲ ಅಂಗನವಾಡಿಯಲ್ಲಿ ಹಿರಿಯ ನಾಗರಿಕರ ದಿನಾಚರಣೆ ಶನಿವಾರ ನಡೆಯಿತು.
ಕೋಟೆಕಾರ್ ಪಟ್ಟಣ ಪಂಚಾಯತ್ ನ ಉಪಾಧ್ಯಕ್ಷ ಪ್ರವೀಣ್ ಐ. ಮುಖ್ಯ ಅತಿಥಿಯಾಗಿದ್ದರು. ರೋಟರಿ ಕ್ಲಬ್ ಮಂಗಳೂರಿನ ಅಧ್ಯಕ್ಷ ಪ್ರೊ.ವಿನೋದ್ ಅರನ್ಹ, ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್ ನ ಸಮಾಲೋಚಕಿ ರಕ್ಷಿತಾ ಕೆ ಹಿರಿಯ ನಾಗರಿಕರಿಗೆ ಸರಕಾರದಿಂದ ದೊರೆಯುವ ಯೋಜನೆಗಳು, ಸೌಲಭ್ಯಗಳು ಮತ್ತು ಹಕ್ಕುಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹಿರಿಯರಿಗೆ ಸಹಾಯವಾಗುವಂತೆ 1 ವೀಲ್ಚೇರ್ ಮತ್ತು 10 ವಾಕಿಂಗ್ ಸ್ಟಿಕ್ ಗಳನ್ನು ರೋಟರಿ ಕ್ಲಬ್ ವತಿಯಿಂದ ವಿತರಿಸಲಾಯಿತು.
ಒಟ್ಟು 35 ಮಂದಿ ಹಿರಿಯ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದರು. ರೋಶನಿ ನಿಲಯ ಪ್ರಾಂಶುಪಾಲ ಡಾ.ಸೋಫಿಯಾ ಫರ್ನಾಂಡಸ್ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು.
ಬಿಎಸ್ಡಬ್ಲ್ಯು ವಿಭಾಗಾಧ್ಯಕ್ಷೆ ಡಾ.ವೀಣಾ ಬಿ.ಕೆ., ಫೀಲ್ಡ್ ಸೂಪರ್ವೈಸರ್ ರೇಷ್ಮಾ ಲೋಬೋ, ಐಕ್ಯೂಎಸಿ ಸಂಯೋಜಕಿ ಡಾ. ಸರಿತಾ ಡಿ ಸೋಜ ಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತೆ ಮೀನಾಕ್ಷಿ ಸ್ವಾಗತಿಸಿದರು. ಭಗಿನಿ ಪ್ರಿಯಾ ವೆರೋನಿಕಾ ಡಿ ಸೋಜ, ಬಿಎಸ್ಡಬ್ಲ್ಯು ತೃತೀಯ ವರ್ಷದ ವಿದ್ಯಾರ್ಥಿಗಳಾದ ಪ್ರಿಯಾ ವೆರೋನಿಕಾ ಡಿ ಸೋಜ , ಶ್ರೇಯ ಪಿ.ಎಸ್ ಹಾಗೂ ರಾಹುಲ್ ಕಾರ್ಯಕ್ರಮ ಸಂಯೋಜಿಸಿದರು.