ಮಂಗಳೂರು: ಹಜ್ ಯಾತ್ರಾರ್ಥಿಗಳಿಗೆ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ

Update: 2024-04-30 06:59 GMT

ಮಂಗಳೂರು, ಎ.30: ದ.ಕ. ಮತ್ತು ಉಡುಪಿ ಜಿಲ್ಲೆಯಿಂದ 2024ನೇ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ಕೆ ಜಪ್ಪಿನಮೊಗೇರು ಯೆನೆಪೊಯ ಶಾಲಾ ವಠಾರದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ಯೆನೆಪೊಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ವೈ.ಅಬ್ದುಲ್ಲ ಕುಂಞಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಕರ್ನಾಟಕ ರಾಜ್ಯ ಹಜ್ ಸಮಿತಿಯ ಸದಸ್ಯರಾದ ಸೈಯದ್ ಅಶ್ರಫ್ ತಂಙಳ್ ಅಸ್ಸಖಾಫ್ ಮದನಿ ಆದೂರು ದುಆ ನಿರ್ವಹಿಸಿದರು.

ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಬಿಸಿಸಿಐ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ದ.ಕ. ಮತ್ತು ಉಡುಪಿ ಮುಸ್ಲಿಮ್ ಸೆಂಟ್ರಲ್ ಹಾಜಿ ಮುಹಮ್ಮದ್ ಹನೀಫ್, ಪ್ರಮುಖರಾದ ಬಿ.ಎಸ್.ಬಶೀರ್, ಸಿಎಚ್.ಉಳ್ಳಾಲ, ಹನೀಫ್ ಹಾಜಿ ಗೋಳ್ತಮಜಲು, ರಿಯಾಝ್ ಬಂದರು, ರಾಜ್ಯ ಹಜ್ ಸಮಿತಿಯ ಅಧಿಕಾರಿ ಅಕ್ರಂ, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದ.ಕ. ಜಿಲ್ಲೆಯ 1,044 ಮತ್ತು ಉಡುಪಿ ಜಿಲ್ಲೆಯ 79 ಮಂದಿ ಸೇರಿದಂತೆ ಒಟ್ಟು 1,123 ಮಂದಿಗೆ ಲಸಿಕೆಗೆ ವ್ಯವಸ್ಥೆ ಮಾಡಲಾಗಿದೆ.

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News