ಕೊಣಾಜೆ: ರಸ್ತೆ ಸ್ವಚ್ಛತೆ ಶ್ರಮದಾನದೊಂದಿಗೆ ಮತದಾನ ಜಾಗೃತಿ ಅಭಿಯಾನ ಸಂಪನ್ನ

Update: 2024-04-24 12:50 GMT

ಕೊಣಾಜೆ: ಲೋಕ ಸಭಾ ಚುಣಾವಣೆ2024 ರ ಅಂಗವಾಗಿ ಅಪ್ನಾದೇಶ್ ಮಾದರಿ ಗ್ರಾಮ ಅಭಿಯಾನದಡಿ ಜನ ಶಿಕ್ಷಣ ಟ್ರಸ್ಟ್ ಸಂಯೋಜಿಸಿದ 48 ದಿನಗಳ ಮತದಾರರ ಜಾಗೃತಿ ಅಭಿಯಾನ ಮುಡಿಪುನಲ್ಲಿ ರಸ್ತೆ ಸ್ವಚ್ವತೆ ಶ್ರಮದಾನದೊಂದಿಗೆ ಸಂಪನ್ನಗೊಂಡಿತು.

ಮುಡಿಪು- ಇರಾ ಕ್ರಾಸ್ ರಸ್ತೆ ಸ್ವಚ್ಛತೆ ಶ್ರಮದಾನದಲ್ಲಿ ಸ್ಮೈಲ್ ಸ್ಕಿಲ್ ಸ್ಕೂಲ್ ವಿದ್ಯಾರ್ಥಿನಿಯರು, ಸ್ವಚ್ಚತಾ ಸೇನಾನಿಗಳು ಭಾಗವಹಿಸಿ ದ್ವಿಪಥ ರಸ್ತೆ ಬದಿಗಳಲ್ಲಿ ಬಿದ್ದಿದ್ದ ತ್ಯಾಜ್ಯಗಳನ್ನು ಸಂಗ್ರಹಿಸಿ, ವಿಂಗಡಿಸಿ ಬಾಳೆಪುಣಿ ಸ್ವಚ್ಚ ಸಂಕೀರ್ಣದ ಮೂಲಕ ನಿರ್ವಹಿಸಲಾಯಿತು. ಶ್ರಮದಾನದೊಂದಿಗೆ ಮತದಾನ ಜಾಗೃತಿ ಘೋಷಣೆ, ಗೀತೆಗಳ ಮೂಲಕ ಮತದಾನದ ಮಹತ್ವದ ಸಂದೇಶ ನೀಡಲಾಯಿತು.

ನರೇಗ ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿಮತದಾನದ ಪ್ರತಿಜ್ನವಿಧಿ ಭೋಧಿಸಿ ರಾಷ್ಟ್ರಿಯ ಪಂಚಾಯತ್ ರಾಜ್ ದಿನಾಚರಣೆಯ ಸಂದೇಶ ನೀಡುವುದರೊಂದಿಗೆ ಕಸಮುಕ್ತ ಸ್ವಚ್ಚ ಪಂಚಾಯತ್ ಪರಿವರ್ತನೆಗೆ ಸಾಮೂಹಿಕ ಸಂಕಲ್ಪ ದೊಂದಿಗೆ ಪ್ರಮಾಣಿಕವಾಗಿ ಶ್ರಮಿಸುವುದು ಅಗತ್ಯವೆಂದರು.ಕುರ್ನಾಡು ಪಂ. ಅಭಿವೃಧ್ಧಿ ಅಧಿಕಾರಿ ಕೇಶವ, ಸ್ವಚ್ಚ ವಾಹಿನಿ ಸಾರಥಿ ವಿದ್ಯಾ, ಸ್ಚಚ್ಚ ಸೇನಾನಿಗಳಾದ ಇಸ್ಮಯಿಲ್ ಕಣಂತೂರು, ಶಮ ಪ್ರಕಾಶ್ ನಡುಪದವು ನವಗ್ರಾಮ, ರಝಿಯ, ಕಾಂತಿಮತಿ, ಸುಗಂಧಿ ಅನುಭವಗಳನ್ನು ಹಂಚಿಕೊಂಡರು. ಸ್ಮೈಲ್ ಸ್ಕಿಲ್ ಸ್ಕೂಲ್ ನ ಪ್ರಜ್ನ, ಶಮಿಕ, ಓಫಿಯ ತಂಡ ಮತದಾನದ ಜಾಗೃತಿ ಗೀತೆಗಳನ್ನು ಹಾಡಿದರು. ಜನ ಶಿಕ್ಷಣದ ನಿರ್ದೇಶಕರು ಅಭಿಯಾನದ ಆಶಯಗಳ ಬಗ್ಗೆ ಪ್ರಾಸ್ತಾವಿಕ ಮತನ್ನಾಡಿದರು. ವಿಜೇತ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News