ದಾರುನ್ನೂರ್ ಎಜುಕೇಷನ್ ಸೆಂಟರ್ ಮಂಗಳೂರು ವಲಯ ಕಚೇರಿ ಉದ್ಘಾಟನೆ

Update: 2024-04-28 14:03 GMT

ಮಂಗಳೂರು, ಎ.28: ದಾರುನ್ನೂರ್ ಎಜುಕೇಷನ್ ಸೆಂಟರ್ ಇದರ ಮಂಗಳೂರು ವಲಯದ ನೂತನ ಕಚೇರಿ ಬಂದರಿನ ರೀಗಲ್ ಫ್ಲಾಝಾದಲ್ಲಿ ರವಿವಾರ ಕಾರ್ಯಾರಂಭಗೊಂಡಿತು.

ದ.ಕ. ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಂಸ್ಥೆಯ ಕೇಂದ್ರ ಸಮಿತಿಯ ನಿರ್ದೇಶಕರು ಮಂಗಳೂರು ವಲಯದ ಅಧ್ಯಕ್ಷ ಅಲ್ ಹಾಜ್ ಕೆ ಎಸ್ ಮೊಹಮ್ಮದ್ ಮಸೂದ್ ಹಾಗೂ ಸಂಸ್ಥೆಯ ಗೌರವಾಧ್ಯಕ್ಷ ಹಾಜಿ ಶರೀಫ್ ವೈಟ್ ಸ್ಟೋನ್ ಇವರು ಉದ್ಘಾಟಿಸಿದರು.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಾಜಿ ಅಬ್ದುಲ್ ರವೂಫ್ ಸುಲ್ತಾನ್ ಗೋಲ್ಡ್, ಯೆನೆಪೊಯ ಸಂಸ್ಥೆಯ ಜಾವೀದ್ ಯೆನೇಪೊಯ, ಡಾ. ಮೊಹಮ್ಮದ್ ಆರೀಫ್ ಮಸೂದ್, ಮಂಗಳೂರು ವಲಯದ ಉಪಾಧ್ಯಕ್ಷರಾದ ಸ್ವಾಲಿಹ್ ತಂಙಳ್, ಮೊಹಮ್ಮದ್ ಹನೀಫ್, ಪ್ರಧಾನ ಕಾರ್ಯದರ್ಶಿ ಸಾಹುಲ್ ಹಮೀದ್ ತಂಙಳ್, ಕೋಶಾಧಿಕಾರಿ ಅದ್ದು ಹಾಜಿ, ಜೊತೆ ಕಾರ್ಯದರ್ಶಿ ಎಫ್. ಅಬ್ದುಲ್ ಜಲೀಲ್, ಸದಸ್ಯರಾದ ಹಾಜಿ ರಶೀದ್, ಹಾಜಿ ಇಬ್ರಾಹೀಂ, ಪಕೀರಬ್ಬ ಮಾಸ್ಟರ್, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ ಸಮದ್, ಉಪಾಧ್ಯಕ್ಷರಾದ ಹಾಜಿ ಅಬ್ದುಲ್ ರಹ್ಮಾನ್ ಆಸ್ಕೊ, ಲೆಕ್ಕ ಪರಿಶೋಧಕರಾದ ಹಾಜಿ ಅಬೂಸ್ವಾಲಿಹ್, ಸದಸ್ಯರಾದ ಹಾಜಿ ಪಿ.ಬಿ. ಅಬ್ದುಲ್ ಹಮೀದ್ ಯು ಎ ಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಶಂಸುದ್ದೀನ್ ಸೂರಲ್ಪಾಡಿ, ಮಂಗಳೂರು ರೇಂಜ್ ಮದ್ರಸ ಮ್ಯಾನೇಜ್ಮೆಂಟ್‌ನ ಅಧ್ಯಕ್ಷ ಹಾಜಿ ರಿಯಾಝುದ್ದೀನ್, ಕಿನ್ಯ ರೇಂಜ್‌ನ ಇಬ್ರಾಹೀಂ ಕೊಣಾಜೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News