ಗರ್ಡಾಡಿ: ಮನೆಗೆ ನುಗ್ಗಿ ನಗ-ನಗದು ಕಳ್ಳತನ

Update: 2024-04-29 05:22 GMT

ಬೆಳ್ತಂಗಡಿ: ಮನೆಯಲ್ಲಿ ಯಾರು ಇಲ್ಲದ ವೇಳೆ ನಗ-ನಗದು ಎಗರಿಸಿದ ಘಟನೆ ಗರ್ಡಾಡಿ ಗ್ರಾಮದ ರನ್ನಾಡಿ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.

ರನ್ನಾಡಿ ನಿವಾಸಿ ಬಿಜುಕುರಿಯನ್‌ (52) ಎಂಬವರು ಭಾನುವಾರ ಬೆಳಿಗ್ಗೆ,ಮನೆಗೆ ಬೀಗ ಹಾಕಿ,ಪತ್ನಿ ಮತ್ತು ತಂದೆಯೊಂದಿಗೆ ಧಾರ್ಮಿಕ‌ ಸ್ಥಳಕ್ಕೆ ತೆರಳಿದ್ದರು. ಕೆಲಹೊತ್ತಿನ ಬಳಿಕ ಹಿಂತಿರುಗಿ ಮನೆಗೆ ಬಂದು ನೋಡಿದಾಗ,ಮನೆಯ ಬಾಗಿಲು ತೆರೆದಿದ್ದು, ಮನೆಯೊಳಗೆ ಹೋಗಿ ನೋಡಿದಾಗ ಕಳ್ಳತನ ಅರಿವಿಗೆ ಬಂದಿದೆ.

29,000ರೂ. ಬೆಲೆಬಾಳುವ ಚಿನ್ನಾಭರಣ ಹಾಗೂ 28,000ರೂ.ನಗದು ಕಳ್ಳತನ ಆಗಿರುವ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News