ಸಿಪಿಐಎಂ ಹಿರಿಯ ಸದಸ್ಯ ಕಾಂ. ಸುಂದರ ಸಾಲ್ಯಾನ್ ನಿಧನ

Update: 2024-05-06 17:06 GMT

ಮಂಗಳೂರು: ಸಿಪಿಐಎಂ ಹಿರಿಯ ಸದಸ್ಯರೂ, ಚಿಂತಕರೂ ಆಗಿರುವ ಕಾಂ.ಸುಂದರ ಸಾಲ್ಯಾನ್(80) ಇಂದು ಮುಂಜಾನೆ ಬಳ್ಳಾಲ್ ಭಾಗ್ ನಲ್ಲಿರುವ ತಮ್ಮ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಸುಂದರ ಸಾಲ್ಯಾನ್ ರವರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.

ಸಿಪಿಐಎಂ ಸಂತಾಪ:- ಕಾರ್ಮಿಕ ಚಳುವಳಿಯ ಪ್ರಮುಖ ಕೇಂದ್ರವಾಗಿದ್ದ ಬೋಳಾರ ಪ್ರದೇಶದ ಅರೆಕೆರೆಬೈಲ್ ನ ಸುಂದರ ಸಾಲ್ಯಾನ್ ನೇಯ್ಗೆ ಹಂಚು ಬೀಡಿ ಕಾರ್ಮಿಕರ ಹೋರಾಟಗಳಲ್ಲಿ ಸ್ವತಃ ಭಾಗವಹಿಸುವ ಮೂಲಕ ಕಮ್ಯುನಿಸ್ಟ್ ಕಾರ್ಯಕರ್ತ ರಾಗಿ ಕಳೆದ 6 ದಶಕಗಳಿಂದ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿ ದುಡಿದಿರುವ ಸುಂದರ ಸಾಲ್ಯಾನ್ ರವರು ದುಡಿಯುವ ವರ್ಗದ ಚಳುವಳಿ ಹೋರಾಟಗಳು ಎಲ್ಲೇ ನಡೆಯಲಿ, ಅಲ್ಲಿ ಭಾಗವಹಿಸುತ್ತಾ ಇತರ ಸಂಗಾತಿಗಳಿಗೆ ಸ್ಪೂರ್ತಿ ತುಂಬುತ್ತಿ ದ್ದರು. ವಿದ್ಯಾರ್ಥಿ ಯುವಜನ ಚಳುವಳಿಯ ಬೆಳವಣಿಗೆಗೆ ದೊಡ್ಡ ಮಟ್ಟದ ಸಹಾಯ ಸಹಕಾರವನ್ನು ನೀಡುತ್ತಾ ಬಂದಿರುವ ಸುಂದರ ಸಾಲ್ಯಾನ್ ರವರು ಎಳೆಯ ಪ್ರಾಯದ ಕಾರ್ಯಕರ್ತರಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದರು. ಒಟ್ಟಿನಲ್ಲಿ ಕಾಂ. ಸುಂದರ ಸಾಲ್ಯಾನ್ ರವರ ಅಗಲುವಿಕೆಯು ದ.ಕ.ಜಿಲ್ಲೆಯ ಕಮ್ಯುನಿಸ್ಟ್ ಚಳುವಳಿಗೆ ಅಪಾರ ನಷ್ಟವುಂಟಾಗಿದೆ ಎಂದು ಸಿಪಿಐಎಂ ದ.ಕ.ಜಿಲ್ಲಾ ಸಮಿತಿಯು ತಮ್ಮ ಭಾವಪೂರ್ಣ ಶ್ರದ್ಧಾಂಜಲಿಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News