ದ.ಕ. ಜಿಲ್ಲೆಯ ಕೆಲವೆಡೆ ಮಳೆ

Update: 2024-05-07 14:56 GMT

ಮಂಗಳೂರು, ಮೇ 7: ದ.ಕ.ಜಿಲ್ಲೆಯ ಗ್ರಾಮೀಣ ಭಾಗವಾದ ಸಂಪಾಜೆ, ಸುಳ್ಯ, ಸುಬ್ರಹ್ಮಣ್ಯ, ಕೊಕ್ಕಡ ಮತ್ತಿತರ ಕೆಲವು ಕಡೆ ಮಂಗಳವಾರ ಬೆಳಗ್ಗೆ ಮತ್ತು ಸಂಜೆ ಮಳೆಯಾಗಿದೆ. ಬಳಿಕ ಮಧ್ಯಾಹ್ನದವರೆಗೆ ಬಿಸಿಲು ಸಹಿತ ಒಣಹವೆ ಮತ್ತು ಸಂಜೆಯ ವೇಳೆ ಬಹುತೇಲ ಕಡೆ ಮೋಡ ಕವಿದ ವಾತಾವರಣ ಕಂಡು ಬಂದಿತ್ತು.

ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂದಿನ 2-3 ದಿನ ಸಂಜೆ ಮತ್ತು ರಾತ್ರಿ ಮೋಡದ ವಾತಾವರಣ ಸಹಿತ ಅಲ್ಲಲ್ಲಿ ಮಳೆಯಾಗಲಿದೆ ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News