ಗ್ಯಾರೇಜು ಕಾರ್ಮಿಕರ ಅವಹೇಳನ: ಕ್ಷಮೆಯಾಚಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ

Update: 2024-05-08 13:53 GMT

ಮಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋನಲ್ಲಿ ಗ್ಯಾರೇಜ್ ವೃತ್ತಿಯವರ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡನೀಯವಾಗಿದೆ. ತಕ್ಷಣ ವಾಹಿನಿಯವರು ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ದ.ಕ. ಹಾಗೂ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಕಿಶೋರ್ ಕೇಶವ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಮೆಕ್ಯಾನಿಕ್ ವೃತ್ತಿ ಭಾಂದವರ ವೃತ್ತಿಯನ್ನು ಅವಹೇಳನ ಮಾಡಿ ದ್ದಲ್ಲದೆ ಕಾರ್ಮಿಕರನ್ನು ಗ್ರೀಸ್ ತಿಂದು ಬದುಕುವವರೆಂದು ನಿಂದಿಸಲಾಗಿದೆ. ಆದರೆ, ನಮ್ಮ ವೃತ್ತಿ ಧರ್ಮದವರು ಯಾರೂ ಗ್ರೀಸ್ ತಿನ್ನುವುದಿಲ್ಲ. ಮರ್ಯಾದೆಯಿಂದ ಬದುಕುವವರಾಗಿದ್ದೇವೆ. ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ನೀಡಿ ಉನ್ನತ ಹುದ್ದೆಗಳಿಗೆ ಸೇರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮೆಕ್ಯಾನಿಕ್ ವೃತ್ತಿ ಭಾಂದವರು ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ ಎಂದರು.

ಮೆಕ್ಯಾನಿಕ್‌ಗಳು ಇಲ್ಲದಿದ್ದರೆ ಇಂದು ವಾಹನಗಳು ಇರುತ್ತಿರಲಿಲ್ಲ. ಇಂತಹ ರಿಯಾಲಿಟಿ ಶೋಗಳೇ ನಡೆಯುತ್ತಿರಲಿಲ್ಲ. ವಾಹನಗಳೇ ಅತೀ ಅಗತ್ಯವಾಗಿರುವ ಇಂದಿನ ದಿನದಲ್ಲಿ ನಮ್ಮ ವೃತ್ತಿಯನ್ನು ಹಿಯಾಳಿಸಿದಾಗ ತೀರ್ಪುಗಾರರು ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿರುವುದು ಅವರ ಮನಸ್ಥಿತಿಯನ್ನು ವಿವರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಿನಗಳಲ್ಲಿ ಪ್ರೇಕ್ಷಕರನ್ನು ರಂಜಿಸುವ ಭರದಲ್ಲಿ ವೃತ್ತಿ ನಿರತ ಜನರ ಮನಸ್ಸನ್ನು ನೋಯಿಸುವ ಅಪರಾಧ ಮಾಡದಿರಿ ಹಾಗೂ ಯಾವುದೇ ವೃತ್ತಿಯನ್ನು ತುಚ್ಛ ರೀತಿಯಲ್ಲಿ ಕಾಣುವ ಕೀಳು ದೃಷ್ಟಿಯ ಮನೋಭಾವ ಮರು ಕಳಿಸಬಾರದು ಎಂದು ಅವರು ಆಗ್ರಹಿಸಿದರು.

ಪದಾಧಿಕಾರಿಗಳಾದ ದಿವಾಕರ್ ಬಗಂಬಿಲ, ಉಪಾಧ್ಯಕ್ಷ ದಿನಕರ್ ಕುಲಾಲ್, ಪ್ರ. ಕಾರ್ಯದರ್ಶಿ ಪುರುಷೋತ್ತಮ್ ಕಮಿಲ, ಕೋಶಾಧಿಕಾರಿ ರಾಜ್ ಗೋಪಾಲ್, ಪ್ರಮುಖರಾದ ಕಿರಣ್ ರಾಜ್, ಪುಂಡಲಿಕ ಸುವರ್ಣ, ಸತೀಶ್ ಗಟ್ಟಿ, ಯೋಗೀಶ್ ಕುಲಾಲ್, ಕೃಷ್ಣಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News