ಮುನ್ನೆಚ್ಚರಿಕೆ ಕ್ರಮ ವಹಿಸಲು ಮೆಸ್ಕಾಂ ಸೂಚನೆ

Update: 2024-05-08 13:57 GMT

ಮಂಗಳೂರು, ಮೇ 8: ಮಳೆಗಾಲದಲ್ಲಿ ಸಂಭವಿಸಬಹುದಾದ ಅವಘಡಗಳನ್ನು ತಪ್ಪಿಸುವ ಸಲುವಾಗಿ ಮುನ್ನೆಚ್ಚರಿಕೆ ವಹಿಸಲು ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ) ಸೂಚನೆ ನೀಡಿದೆ.

ಮಳೆಗಾಲದಲ್ಲಿ ತುಂಡಾಗಿ ಬಿದ್ದ ವಿದ್ಯುತ್ ಕಂಬ, ತಂತಿ ಮತ್ತಿತರ ಉಪಕರಣಗಳನ್ನು ಮುಟ್ಟಬಾರದು, ವಿದ್ಯುತ್ ಕಂಬಗಳಿಗೆ ಜಾನುವಾರುಗಳನ್ನು ಕಟ್ಟಬಾರದು ಎಂದು ಎಚ್ಚರಿಸಿವೆ.

ಗ್ರಾಹಕರ ಸೇವಾ ಕೇಂದ್ರವನ್ನು ದಿನದ 24 ಗಂಟೆಯೂ ತೆರೆದಿಡಲಾಗುತ್ತದೆ. ಸಮಸ್ಯೆಗಳಿದ್ದರೆ ವಾಟ್ಸ್‌ಆ್ಯಪ್ ನಂಬ್ರ 9483041912ನ್ನು ಸಂಪರ್ಕಿಸಬಹುದು ಅಥವಾ ‘ನನ್ನ ಮೆಸ್ಕಾಂ’ ಆ್ಯಪ್ ಮೂಲಕ ಮಾಹಿತಿ ನೀಡಬಹುದು. ಗ್ರಾಹಕರ ಸೇವಾ ಕೇಂದ್ರಗಳಾದ ಜೆಪ್ಪು (0824-2418066),ಮಲ್ಲಿಕಟ್ಟೆ (0824-2425599),ನೆಹರೂ ಮೈದಾನ (0824-2423127),ಮಣ್ಣಗುಡ್ಡ (0824- 2456919), ಕುಲಶೇಖರ (0824-2231039), ವಾಮಂಜೂರು (0824-2263001), ಉಳ್ಳಾಲ (0824-2466233), ಕೊಣಾಜೆ (0824-2221912)ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News