ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಗುರುವಂದನ ಕಾರ್ಯಕ್ರಮ

Update: 2024-05-09 17:02 GMT

ಮಂಗಳೂರು: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ತನ್ನ ಮೊದಲ ಎಂಬಿಬಿಎಸ್ 99ರ ಬ್ಯಾಚ್‌ನ ಗುರುವಂದನ ಮತ್ತು 25ನೇ ವರ್ಷದ ಪುನರ್ಮಿಲನ ಕಾರ್ಯಕ್ರಮವು ಮಿನಿ ಕನ್ವೆನ್ಷನ್ ಸೆಂಟರ್‌ನಲ್ಲಿ ಶನಿವಾರ ನಡೆಯಿತು.

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ಫಾ. ಅಜಿತ್ ಮಿನೇಜಸ್ ಅರ್ಪಿಸಿದ ಪವಿತ್ರ ಪೂಜೆಯ ಬಲಿದಾನದೊಂದಿಗೆ ಕಾರ್ಯಕ್ರಮಆರಂಭಗೊಂಡಿತು. ಎಂಬಿಬಿಎಸ್ 99ರ ಬ್ಯಾಚ್‌ನ ವಿದ್ಯಾರ್ಥಿಗಳು ಹಳೆಯ ದಿನಗಳನ್ನು ಮೆಲುಕು ಹಾಕಿದರು. ಮೈಕ್ರೋಬಯಾಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಹಿಲ್ಡಾ ಪಿಂಟೋ ತೆಗೆದುಕೊಂಡ ತರಗತಿಯಲ್ಲಿ ಹಾಜರಾದರು.

ಡಾ.ಜೆರ್ಮಿನ್ ಹ್ಯಾರಿಯೆಟ್ ಮತ್ತು ತಂಡದ ಸದಸ್ಯರು ಪ್ರಾರ್ಥನಾ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮಾಜಿ ಡೀನ್ ಡಾ. ಸಂಜೀವ ರೈ ಮತ್ತು ಮಾಜಿ ಆಡಳಿತಾಧಿಕಾರಿ ಫಾ. ಡೆನ್ನಿಸ್ ಡೇಸಾ, ಚಾರಿಟೇಬಲ್ ಇನ್ಸ್ಟಿಟ್ಯೂಶನ್ ನಿರ್ದೇಶಕ ಫಾ. ರಿಚರ್ಡ್ ಕುವೆಲ್ಲೊ, ಫಾ. ಅಜಿತ್ ಮಿನೇಜಸ್, ಫಾ. ವಲೇರಿ ಯನ್ ಡಿಸೋಜ, ಫಾ. ವಿಲಿಯಂ ಮಿನೇಜಸ್, ಡಾ. ಆಂಟನಿ ಎಸ್. ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಡಾ.ಅರ್ಚನಾ ಭಟ್ ಸ್ವಾಗತಿಸಿದರು. 99ನೆ ಬ್ಯಾಚ್‌ನ ವಿದ್ಯಾರ್ಥಿ, ಕನ್ಸಲ್ಟೆಂಟ್ ವಿಟ್ರಿಯೊ ರೆಟಿನಲ್ ಸರ್ಜನ್ ಡಾ. ಗ್ಲಾಡಿಸ್ ರೊಡ್ರಿಗಸ್ ಮತ್ತು ಮಂಗಳೂರಿನ ಕುಟುಂಬ ವೈದ್ಯೆ ಡಾ. ಕುಸುಮಾ ಸಚಿನ್ ಕಾರ್ಯಕ್ರಮ ನಿರೂಪಿಸಿದರು. ಕೆಎಂಸಿ ಮಂಗಳೂರಿನ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಮತ್ತು ಮಣಿಪಾಲ್ ಆಸ್ಪತ್ರೆಗಳ ತುರ್ತು ಚಿಕಿತ್ಸಾ ವಿಭಾಗದ ಪ್ರಾದೇಶಿಕ ಮುಖ್ಯಸ್ಥ ಡಾ. ಜೀಧು ರಾಧಾಕೃಷ್ಣನ್ ವಂದಿಸಿದರು.








 


 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News