ಬದುಕಿನ ಪರೀಕ್ಷೆಯನ್ನು ಎದುರಿಸುವ ಶಿಕ್ಷಣ ಬೇಕು: ಪ್ರಭಾಕರ ಕಾಪಿಕಾಡ್

Update: 2024-05-10 16:37 GMT

ಮಂಗಳೂರು: ಸುಮಾರು 80ರ ದಶಕವನ್ನು ಗಮನಿಸಿದಾಗ ಈಗಿನ ಸಮಾಜವು ಬಹಳಷ್ಟು ಬದಲಾಗಿದೆ. ಪ್ರಸ್ತುತ ಸಮಾಜದಲ್ಲಿ ಸೌಹಾರ್ದ ಕಾಣುವುದು ಮರುಭೂಮಿಯಲ್ಲಿ ನಡೆದಾಡುವ ಜನತೆಗೆ ಓಯಸಿಸ್ ಕಂಡ ತೆರನಾದ ನೆಮ್ಮದಿ ನೀಡುತ್ತದೆ. ಇಂದಿನ ಶಿಕ್ಷಣವು ಕೂಡ ಮಕ್ಕಳಿಗೆ ಆದರ್ಶದ ಪಾಠ ಹೇಳಿಕೊಡುವಲ್ಲಿ ವಿಫಲವಾಗುತ್ತಿದೆ. ಹಾಗಾಗಿ ಬದುಕಿನ ಪರೀಕ್ಷೆಯನ್ನು ಎದುರಿಸುವ ಶಿಕ್ಷಣ ಬೇಕು ಎಂದು ಹಿರಿಯ ರಂಗಭೂಮಿ ಕಲಾವಿದ ಪ್ರಭಾಕರ ಕಾಪಿಕಾಡ್ ಹೇಳಿದರು.

ಸೌಹಾರ್ದ ಕಲಾವಿದರು ಕುತ್ತಾರು ಇದರ ಆಶ್ರಯದಲ್ಲಿ ಕುತ್ತಾರಿನಲ್ಲಿರುವ ದ.ಕ.ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ‘ಚಿಣ್ಣರ ಚಿಗುರು ಮಕ್ಕಳ ಸಂತಸ ಕಲಿಕಾ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೌಹಾರ್ದ ಕಲಾವಿದರು ಕುತ್ತಾರ್ ಇದರ ನಿರ್ದೇಶಕ ಮಿಥುನ್‌ರಾಜ್ ಕುತ್ತಾರ್ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಪಂ ಮುಖ್ಯ ಶಿಕ್ಷಕಿ ಪ್ರಮೀಳಾ ಗ್ರೇಸಿ ಡಿಸೋಜ, ಮುನ್ನೂರು ಗ್ರಾಪಂ ಸದಸ್ಯೆ ರಾಜೇಶ್ವರಿ ತಳೆನೀರು, ಮನೋಜ್ ವಾಮಂಜೂರು, ಎಸ್‌ಡಿಎಂಸಿ ಅಧ್ಯಕ್ಷ ಉಸ್ಮಾನ್ ಫಯಾಝ್, ದೈಹಿಕ ಶಿಕ್ಷಕಿ ಶಶಿಕಲಾ ಉಪಸ್ಥಿತರಿದ್ದರು.

ಶಿವಾಣಿ ಸ್ವಾಗತಿಸಿದರು. ಖುಷಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News