×
Ad

ಬಾಳೆಪುಣಿ: ಕಸ ಎಸೆದ ಇಬ್ಬರಿಂದ ದಂಡ ವಸೂಲಿ

Update: 2025-03-20 22:44 IST

ಸಾಂದರ್ಭಿಕ ಚಿತ್ರ

ಕೊಣಾಜೆ: ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡ್ವಾಯಿ ಹಾಗೂ ವಿದ್ಯಾನಗರದ ರಸ್ತೆಯ ಬಳಿ ಕಸ ಎಸೆದು ಹೋಗಿದ್ದ ಇಬ್ಬರಿಂದ ಬಾಳೆಪುಣಿ ಗ್ರಾಮ ಪಂಚಾಯತ್ ‌ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಿದೆ.

ಇತ್ತೀಚೆಗೆ ಬಾಳೆಪುಣಿ ಗ್ರಾಮದ ಕಡ್ವಾಯಿ ರಸ್ತೆಯ ಬಳಿ ವ್ಯಕ್ತಿಯೊಬ್ಬರು ವಾಹನದಲ್ಲಿ ಬಂದು ಕಸ ಎಸೆದು ತೆರಳಿದ್ದರು. ಅಲ್ಲದೆ ಕೈರಂಗಳ ಗ್ರಾಮದ ವಿದ್ಯಾನಗರ ಎಂಬಲ್ಲಿಯೂ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬರು ಕಸ ಎಸೆದಿದ್ದರು. ಈ ಎರಡೂ ಕಡೆ ಕಸ ಎಸೆದ ವ್ಯಕ್ತಿಗಳ ವಾಹನ ಸಂಖ್ಯೆಯನ್ನು ಪತ್ತೆ ಹಚ್ಚಿ ಬಾಳೆಪುಣಿ ಗ್ರಾಮ ಪಂಚಾಯತ್ ಗೆ ತಿಳಿಸಿದ್ದರು. ಬಳಿಕ ಪಂಚಾಯತ್ ವತಿಯಿಂದ ಕೊಣಾಜೆ ಪೊಲೀಸ್ ಠಾಣೆಗೂ ದೂರು ನೀಡಲಾಗಿತ್ತು. ಬಳಿಕ ಕಸ‌ ಎಸೆದವರ ಗುರುತು ಪತ್ತೆಯಾದ ಬಳಿಕ ಪಂಚಾಯತ್ ಸ್ವಚ್ಛತಾ ನೀತಿ ಉಲ್ಲಂಘನೆ ನೀತಿಯಡಿ ಇಬ್ಬರಿಂದ ತಲಾ ರೂ.5000 ದಂತೆ ದಂಡವನ್ನು ವಸೂಲಿ ಮಾಡಿದೆ ಅಲ್ಲದೆ ಮುಂದೆ ಕಸ ಎಸೆಯದಂತೆ ಎಚ್ಚರಿಕೆಯನ್ನೂ ನೀಡಿ ಕಳುಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News