ಕೊಳತ್ತಮಜಲ್ ಅಬ್ದುರ್ರಹ್ಮಾನ್ ಕುಟುಂಬಕ್ಕೆ ದ.ಕ.ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ನೆರವು
ಮಂಗಳೂರು, ಮೇ 1: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕೊಳತ್ತಮಜಲ್ ಅಬ್ದುರ‌್ರಹ್ಮಾನ್ ಮನೆಗೆ ಭೇಟಿ ನೀಡಿದ ದ.ಕ.ಜಿಲ್ಲಾ ಸಮಸ್ತ ಮದ್ರಸ ಮ್ಯಾನೇಜ್ಮೆಂಟ್‌ನ ನಿಯೋಗವು ಕುಟುಂಬಕ್ಕೆ ಸಾಂತ್ವನ ಹೇಳಿತು. ಅಲ್ಲದೆ ಧನಸಹಾಯವಾಗಿ 1 ಲಕ್ಷ ರೂ. ಮೊತ್ತದ ಚೆಕ್ ಹಸ್ತಾಂತರಿಸಲಾಯಿತು.
ಮಾಹಿನ್ ದಾರಿಮಿ ಮತ್ತು ಕೆ.ಬಿ.ದಾರಿಮಿ ದುಆಗೈದರು. ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಎಂ.ಎಚ್. ಮೊಹಿದಿನ್ ಹಾಜಿಯ ನೇತೃತ್ವದ ನಿಯೋಗದಲ್ಲಿ ಗುರುಪುರ ರೇಂಜ್ ಜಂಇಯ್ಯತುಲ್ ಮುಅಲ್ಲಿಮಿನ್ ಅಧ್ಯಕ್ಷ ನಝೀರ್ ಅಝ್ಹರಿ, ರಫೀಕ್ ಹಾಜಿ ಕೊಡಾಜೆ, ಮೆಟ್ರೋ ಶಾಹುಲ್ ಹಮೀದ್ ಹಾಜಿ, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಇಬ್ರಾಹಿಮ್ ಕೊಣಾಜೆ, ರಿಯಾಝ್ ಹಾಜಿ ಬಂದರ್, ಎಸ್. ಹಸನಬ್ಬ ಗುಡ್ಡೆಮನೆ, ಯೂಸುಫ್ ಕೊಳತ್ತಮಜಲ್, ಮಯ್ಯದ್ದಿ ಗುಂಡುಕಲ್, ಅಬೂಬಕ್ಕರ್ ಹಾಜಿ ಮಂಗಳ, ಇಕ್ಬಾಲ್ ನಂದರಬೆಟ್ಟು, ಹಮೀದ್ ಎಂ.ಎಚ್. ಸುಳ್ಯ, ಪಿ.ಕೆ. ಹಸೈನಾರ್ ಸಾಲೆತ್ತೂರು, ಆರೀಫ್ ಸಾಲೆತ್ತೂರು, ಅಬೂಬಕ್ಕರ್ ಕುಕ್ಕಾಜೆ, ಅಬ್ದುಲ್ ಖಾದರ್ ಸೂರಲ್ಪಾಡಿ, ಅಬೂಬಕ್ಕರ್ ಸೂರಲ್ಪಾಡಿ, ಇಬ್ರಾಹಿಂ ಸಾಗರ್, ಸಾದಿಕ್ ಸೂರಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.